ಬೆಳಗ್ಗಿನ ವೇಳೆ ನೆನೆಸಿಟ್ಟ ಸೌತೆಕಾಯಿಯ ನೀರು ಸೇವಿಸಿದರೆ ಏನಾಗುತ್ತದೆ? - Mahanayaka
11:33 AM Sunday 22 - December 2024

ಬೆಳಗ್ಗಿನ ವೇಳೆ ನೆನೆಸಿಟ್ಟ ಸೌತೆಕಾಯಿಯ ನೀರು ಸೇವಿಸಿದರೆ ಏನಾಗುತ್ತದೆ?

cucumber water
23/09/2023

ಬೆಳಗ್ಗಿನ ವೇಳೆ ಹೆಚ್ಚಿನ ಜನರು ಖಾಲಿ ಹೊಟ್ಟೆಗೆ ಬಿಸಿ ನೀರು, ಗ್ರೀನ್ ಟೀ, ಚಹಾ, ಕಾಫಿ ಹೀಗೆ ಹಲವು ದ್ರವ ರೂಪದ ಆಹಾರವನ್ನ ಸೇವನೆ ಮಾಡುತ್ತಾರೆ. ಆದರೆ, ನೆನೆಸಿಟ್ಟ ಸೌತೆಕಾಯಿ ನೀರನ್ನು ಬೆಳಗ್ಗೆ ಎದ್ದು ಕುಡಿದರೆ ಏನೆಲ್ಲ ಪ್ರಯೋಜನಗಳಿವೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ…

ಬೆಳಗ್ಗೆ ಎದ್ದ ತಕ್ಷಣ ಸೌತೆಕಾಯಿ ನೆನೆಸಿಟ್ಟ ನೀರನ್ನು ಸೇವನೆ ಮಾಡಿದರೆ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನ ದೇಹದಿಂದ ಹೊರ ಹಾಕಿ  ದೇಹ ಶುದ್ಧಿ ಮಾಡುತ್ತದೆ.

ನಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಇರುತ್ತದೆ. ಉಪ್ಪು ರಕ್ತದೊತ್ತಡಕ್ಕೆ ಮುಖ್ಯ ಕಾರಣವಾಗಿದೆ. ಹಾಗಾಗಿ ಸೌತೆಕಾಯಿ ನೆನೆಸಿಟ್ಟ ನೀರನ್ನು ಸೇವನೆ ಮಾಡಿದರೆ, ಇದರಲ್ಲಿರುವ ಪೊಟ್ಯಾಶಿಯಮ್, ಎಲೆಕ್ಟ್ರೋಲೈಟ್ ನಂತೆ ಕೆಲಸ ಮಾಡಿ ಸೋಡಿಯಂ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ತ್ವಚೆಯ ಆರೋಗ್ಯವನ್ನು ಒಳಗಿನಿಂದ ಮತ್ತು ಹೊರಗಿನಿಂದ ಕಾಪಾಡಲು ಇದು ಸಹಕಾರಿಯಾಗಿದೆ.  ಇದರಲ್ಲಿರುವ ವಿಟಮಿನ್ ನಬಿ5 ಆರೋಗ್ಯಕಾರಿ ವರ್ಣವನ್ನು ನೀಡುತ್ತದೆ.

ಸೌತೆಕಾಯಿಯಲ್ಲಿರುವ ವಿಟಮಿನ್ ಕೆ ಅಂಶವು ಪ್ರೋಟಿನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ. ಇದರಿಂದಾಗಿ ನಮ್ಮ ದೇಹದ ಮೂಳೆಗಳ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.ರಕ್ತ ಹೆಪ್ಪುಗಟ್ಟುವಿಕೆ ನಿಯಂತ್ರಿಸಲೂ ಇದು ಸಹಕಾರಿ.

ಪದೇ ಪದೇ ಹಸಿವಾಗುವುದನ್ನು ತಡೆಯಲು ಸೌತೆಕಾಯಿ ಸಹಕಾರಿಯಾಗಿದೆ. ಜೊತೆಗೆ ದೇಹಕ್ಕೆ ಎನರ್ಜಿ ನೀಡುತ್ತದೆ. ಇದರಲ್ಲಿರುವ ಫಿಸ್ಟೆನ್ ಅಂಶ ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಸೌತೆ ಕಾಯಿಯಲ್ಲಿರುವ ಡೈಯೆಟರಿ ಫೈನರ್ ಅಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಸೌತೆಕಾಯಿ ಸಿಪ್ಪೆಯಲ್ಲಿರುವ ಕರಗದ ಫೈಬರ್ ಅಂಶ ಆಹಾರ ಸುಲಭವಾಗಿ ಅನ್ನನಾಳದಲ್ಲಿ ಇಳಿದು ಹೋಗಲು ಸಹಕಾರಿಯಾಗಿದೆ.

ಇತ್ತೀಚಿನ ಸುದ್ದಿ