ತಡ ರಾತ್ರಿ ಆಹಾರ ಸೇವಿಸುವುದು ಉತ್ತಮವೇ? | ಪ್ರತಿನಿತ್ಯ ತಡವಾಗಿ ಆಹಾರ ಸೇವಿಸಿದ್ರೆ ಏನಾಗುತ್ತದೆ?
ಆಹಾರ ಸೇವನೆ ಎಷ್ಟು ಮುಖ್ಯವೋ ಅದನ್ನು ಸರಿಯಾದ ಸಮಯಕ್ಕೆ ಸೇವಿಸುವುದು ಕೂಡ ಅಷ್ಟೇ ಮುಖ್ಯ ಆಹಾರ ಸೇವಿಸುವ ಸಮಯವು ಚಾಯಾಪಚಯ ಕ್ರಿಯೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಆಹಾರ ಸೇವನೆಯ ಸಮಯವು ಜೀರ್ಣ ಕ್ರಿಯೆಯಿಂದ ಆರೋಗ್ಯಕರ ದೇಹದ ತೂಕದ ವರೆಗೆ ಎಲ್ಲದಕ್ಕೂ ಅವಶ್ಯಕವಾಗಿದೆ. ನೀವು ಪ್ರತೀ ಹೊತ್ತು ಕೂಡ ತಡವಾಗಿ ಆಹಾರ ಸೇವನೆ ಮಾಡುತ್ತಿದ್ದರೆ, ಅದು ನಿಮ್ಮ ಆರೋಗ್ಯಕ್ಕೆ ಅಡ್ಡಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಸಾಕಷ್ಟು ಜನರಿಗೆ ತಡ ರಾತ್ರಿಯಲ್ಲಿ ಆಹಾರ ಸೇವಿಸುವ ಅಭ್ಯಾಸವಿರುತ್ತದೆ. ತಮ್ಮೆಲ್ಲ ಕೆಲಸಗಳು ಮುಗಿದ ಬಳಿಕ ತಡ ರಾತ್ರಿ ಆಹಾರ ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಅಧ್ಯಯನಗಳ ಪ್ರಕಾರ ತಡ ರಾತ್ರಿ ತಿನ್ನುವುದು ಚಾಯಾಪಚಯ ಮತ್ತು ರಕ್ತದಲ್ಲಿನ ಸಕ್ಕರೆ ಎರಡರ ಮೇಲೆಯೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ತಡವಾಗಿ ತಿನ್ನುವ ಅಭ್ಯಾಸವು ರಕ್ತದ ಟ್ರೈಗ್ಲಿಸರೈಡ್ ನ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಇದರಿಂದ ಹೃದ್ರೋಗದ ಅಪಾಯ ಕೂಡ ಹೆಚ್ಚಾಗುತ್ತದೆ.
ಆಹಾರವನ್ನು ಸಾಧ್ಯವಾದಷ್ಟು ನಿಮ್ಮ ದಿನಚರಿಯಲ್ಲಿ ಸಮಯಕ್ಕೆ ಸರಿಯಾಗಿ ಸೇವನೆ ಮಾಡುವುದು ಉತ್ತಮ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ಯಾವುದಕ್ಕೂ ಸರಿಯಾಗಿ ಸಮಯ ನೀಡಲಾಗದೇ, ತಮ್ಮ ಆಹಾರ ಸೇವನೆ ವಿಚಾರವನ್ನೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬದಲಾದ ಆಹಾರ ಶೈಲಿಯಿಂದಾಗಿ ಸಾಕಷ್ಟು ಜನರು ಕ್ರಮೇಣ ಗಂಭೀರ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಎಷ್ಟು ತಿನ್ನುತ್ತಾರೆ ಅನ್ನೋದು ಮುಖ್ಯವಲ್ಲ, ಯಾವ ಸಮಯಕ್ಕೆ ಎಷ್ಟು ತಿನ್ನುತ್ತಾರೆ ಅನ್ನೋದ್ರ ಮೇಲೆ ನಿಮ್ಮ ಆರೋಗ್ಯ ನಿರ್ಧಾರವಾಗುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw