ನಿಫಾ ವೈರಸ್ ನ ರೋಗ ಲಕ್ಷಣಗಳೇನು ಗೊತ್ತಾ? | ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು! - Mahanayaka

ನಿಫಾ ವೈರಸ್ ನ ರೋಗ ಲಕ್ಷಣಗಳೇನು ಗೊತ್ತಾ? | ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು!

nipah virus
06/09/2021

ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಕೊವಿಡ್ ಸೋಂಕಿನ ನಡುವೆಯೇ ಭೀತಿ ಸೃಷ್ಟಿಸಿರುವ ನಿಫಾ ವೈರಸ್ ಬಗ್ಗೆ ಒಂದಿಷ್ಟು  ವಿಚಾರಗಳನ್ನು ತಿಳಿದುಕೊಳ್ಳೋಣ. ನಿಫಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವ ಒಂದು ಅಪಾಯಕಾರಿ ರೋಗವಾಗಿದೆ. ಮಾತ್ರವಲ್ಲ, ಇದು ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ.

ಹೌದು..!  ಬಾವಲಿಗಳು, ಹಂದಿಗಳಿಂದ ನಿಫಾ ವೈರಸ್ ಮನುಷ್ಯನಿಗೆ ಹರಡುತ್ತದೆ.  ಜೊತೆಗೆ ಮನುಷ್ಯನಿಂದ ಮನುಷ್ಯನಿಗೂ ಈ ವೈರಸ್ ಸುಲಭವಾಗಿ ಹರಡುತ್ತದೆ. ಹಾಗಾಗಿ ನಿಫಾ ವೈರಸ್ ಸೋಂಕಿತರನ್ನು ನೋಡಿಕೊಳ್ಳುವವರು ಕೂಡ ಬಹಳಷ್ಟು ಜಾಗೃತೆ ವಹಿಸಬೇಕಾಗುತ್ತದೆ. ಆಸ್ಪತ್ರೆಯ ಸಿಬ್ಬಂದಿಯಂತೂ ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

ಕೊವಿಡ್ ಯುಗದಲ್ಲಿ ಎಲ್ಲರೂ ಮಾಸ್ಕ್ ಧರಿಸಲು ಕಲಿತು ಬಿಟ್ಟರು. ಹಾಗೆಯೇ ನಿಫಾ ವೈರಸ್ ನ್ನು ನಿಂದ ರಕ್ಷಣೆ ಪಡೆಯಲು  ಕೂಡ N95 ಮಾಸ್ಕ್  ಪ್ರಯೋಜನಕಾರಿಯಾಗಿದೆ. ವಿಶ್ವದಲ್ಲಿ ಇಲ್ಲಿಯವರೆಗೆ ಯಾರು ಕೂಡ ಕಂಡು ಕೇಳರಿಯದ ರೋಗಗಳು, ಹೊಸ ಹೊಸ ವೈರಸ್ ಗಳು ಇಂದು ಸೃಷ್ಟಿಯಾಗುತ್ತಿವೆ. ಹಾಗಾಗಿ ನಮ್ಮ ಸುರಕ್ಷತೆಯನ್ನು ನಾವೇ ನೋಡಿಕೊಳ್ಳಬೇಕಾಗಿದೆ.

ನಿಫಾ ವೈರಸ್ ನ ಲಕ್ಷಣಗಳೇನು?

ನಿಫಾ ವೈರಸ್ ದೇಹವನ್ನು ಪ್ರವೇಶಿಸಿದ ಬಳಿಕ 4ರಿಂದ 14 ದಿನಗಳೊಳಗೆ ತನ್ನ ಸ್ವಭಾವ ತೋರಿಸಲು ಆರಂಭಿಸುತ್ತದೆ.  ಕೆಲವರಿಗೆ ಸೋಂಕು ತಗಲಿದ್ದರೂ ಅದರ ರೋಗ ಲಕ್ಷಣಗಳು ಕಂಡು ಬರಲು ಹಲವು ದಿನಗಳಾಗಬಹುದು. ಜ್ವರ, ತಲೆ ನೋವು, ತಲೆ ಸುತ್ತುವುದು, ತಲೆ ನೋವು, ಕೆಮ್ಮು, ಹೊಟ್ಟೆ ನೋವು, ವಾಕರಿಗೆ, ವಾಂತಿ, ಆಯಾಸ ಹಾಗೂ ದೃಷ್ಟಿ ಮಂದವಾಗುವುದು ಈ ವೈರಸ್ ನ ಪ್ರಮುಖ ಲಕ್ಷಣಗಳಾಗಿವೆ.

ಮೇಲಿನ ಲಕ್ಷಣಗಳ ಕಾಣಿಸಿಕೊಂಡ ಬಳಿಕ ಒಂದು ಅಥವಾ ಎರಡು ದಿನಗಳೊಳಗೆ ಸೋಂಕಿತ ಕೋಮಾಕ್ಕೆ ಹೋಗುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಇದು ಮೆದುಳಿನ ಮೇಲೆ ಪರಿಣಾಮ ಬೀರುವುದೇ ಆಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ