ಮಹಿಳಾ ರಾಜ್ಯಾಧ್ಯಕ್ಷೆ, ವಿಪಕ್ಷ ನಾಯಕರ ಬಗ್ಗೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ಏನು?
ಚಿಕ್ಕಮಗಳೂರು: ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದು, ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಾದ್ಯಂತ ಕೊಲೆಯಾಗ್ತಿದೆ. ಕಾಂಗ್ರೆಸ್ ನೇತೃತ್ವ, ಕೃಪಾಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಯಾಗ್ತಿದೆ, ದಿಗಂಬರ ಸ್ವಾಮಿ ಕೊಲೆ, ಬೆಂಗಳೂರಲ್ಲಿ ಹಾಡಹಗಲೇ ಟೆಕ್ಕಿ ಸಾಯ್ತಾರೆ. ಉಳ್ಳಾಲದಲ್ಲಿ ನಮ್ಮ ಕಾರ್ಯಕರ್ತನ ಶವ ನೀರಲ್ಲಿ ಸಿಗುತ್ತೆ. ಹನುಮಜಯಂತಿ ಯಶಸ್ವಿಯಾಗಿದ್ದಕ್ಕೆ ವೇಣುಗೋಪಾಲ್ ಕೊಲೆಯಾಗಿದೆ. ಎರಡೇ ತಿಂಗಳಿಗೆ ಸರ್ಕಾರ ನೈತಿಕತೆ ಕಳೆದುಕೊಂಡಿದೆ ಎಂದು ಅವರು ಆರೋಪಿಸಿದ್ರು…
ಗ್ಯಾರಂಟಿ ಎಲ್ಲೋದ್ವು, ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿ ಎಂದಿದ್ರಿ ನಿಮ್ಮ ಮೊದಲ ಕ್ಯಾಬಿನೇಟ್ ಯಾವಾಗ, ಮೊದಲು ಅದನ್ನ ಹೇಳಿ ಎಂದು ಪ್ರಶ್ನಿಸಿದ ಅವ್ರು… A4 ಅಪರಾಧಿಯನ್ನ A1 ಮಾಡ್ತಾರೆ, A1 ಅಪರಾಧಿಯನ್ನ ರಕ್ಷಣೆ ಮಾಡ್ತಾರೆ, ಇದು ಇಂದಿನ ಕಾಂಗ್ರೆಸ್ ಸರ್ಕಾರದ ರಾಜಕೀಯ ನೀತಿ ಎಂದು ಕಿಡಿಕಾರಿದರು.
136 ಸೀಟ್ ಗೆದ್ದಿದ್ದೇವೆಂದು ದರ್ಪದಿಂದಿದ್ದಾರೆ, ಮುಂದೆ ಜನ ಪಾಠ ಕಲಿಸ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಇನ್ನೂ ಮಹಿಳಾ ರಾಜ್ಯಾಧ್ಯಕ್ಷೆ, ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಲು ಶೋಭಾ ಕರಂದ್ಲಾಜೆ ನಿರಾಕರಿಸಿದರು.
ವಿಡಿಯೋ ನೋಡಿ:
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw