“ಪ್ರಧಾನಿ ಮೋದಿ ರೋಡ್ ಶೋಗೆ ಆದ ಖರ್ಚು ವೆಚ್ಚಗಳೆಷ್ಟು?” - Mahanayaka

“ಪ್ರಧಾನಿ ಮೋದಿ ರೋಡ್ ಶೋಗೆ ಆದ ಖರ್ಚು ವೆಚ್ಚಗಳೆಷ್ಟು?”

pm modi
09/05/2023

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿಗೆ 40 ಲಕ್ಷ ರೂ. ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಮಾಡಿರುವ ರೋಡ್‌ ಶೋ ವ್ಯವಸ್ಥೆಯ ಖರ್ಚುವೆಚ್ಚಗಳನ್ನು ನೀಡಿದವರು ಯಾರು ಎನ್ನುವ ಮಾಹಿತಿ ನೀಡುವಂತೆ ಜೆಡಿಎಸ್‌ ವಕ್ತಾರ ಎನ್‌. ಆರ್‌. ರವಿಚಂದ್ರೇ ಗೌಡ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.


Provided by

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪ್ರಧಾನಿ ರೋಡ್‌ ಶೋ ವೇಳೆ ಸಾವಿರಾರು ಸಂಖ್ಯೆಯನ್ನು ಪೊಲೀಸರನ್ನು ಬಳಸಲು ಅವಕಾಶವಿದೆಯೇ? ಪ್ರಧಾನಿಯವರು ನಗರದ ಗನ್‌ ಹೌಸ್‌ ನಿಂದ ಸಯ್ನಾಜಿರಾವ್‌ ರಸ್ತೆಯ ಹೈವೇ ಸರ್ಕಲ್‌ ವರೆಗೆ ನಡೆಸಿದ ಸುಮಾರು ನಾಲ್ಕು ಕಿ.ಮೀ. ರೋಡ್‌ ಶೋದ ಖರ್ಚು ವೆಚ್ಚವನ್ನು ಯಾರು ನೋಡಿಕೊಂಡಿದ್ದಾರೆ? ಇದಕ್ಕೆ ಎಷ್ಟು ಖರ್ಚು ಆಗಿದೆ ಹಾಗೂ ಇದರಲ್ಲಿ ಸರಕಾರದ ಪಾತ್ರವೇನು ಮುಂತಾದ ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸಲು ಮನವಿ ಮಾಡಿರುವುದಾಗಿ ತಿಳಿಸಿದರು.

ಸಂಹಿತೆ ಜಾರಿಯಾದ ಬಳಿಕ ಈ ರೀತಿಯ ರೋಡ್‌ ಶೋಗಳನ್ನು ನಡೆಸಲು ಪ್ರಜಾಪ್ರತಿನಿಧಿ ಕಾಯ್ದೆ 1951 ಅಥವಾ ಚುನಾವಣ ಮಾದರಿ ನೀತಿ ಸಂಹಿತೆಯಲ್ಲಿ ಅವಕಾಶವಿದೆಯೆ? ರೋಡ್‌ ಶೋಗೆ ಸುಮಾರು ನಾಲ್ಕು ಕಿ.ಮೀ. ಉದ್ದದ ಕೇಸರಿ ಬಾವುಟ, ಕಬ್ಬಿಣದ ಬ್ಯಾರಿಕೇಡ್‌ ಹಾಗೂ ಜನರು ಆಸೀನರಾಗಲು ಒದಗಿಸಿದ ಕುರ್ಚಿ ಟಾರ್ಪಾಲ್‌ಗ‌ಳನ್ನೂ ಸರಬರಾಜು ಮಾಡಿದವರ್ಯಾರು ಎಂಬುದನ್ನೂ ಬಹಿರಂಗ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ