ಏನಿದು ಹಲಾಲ್ ಮಾಂಸ?  ಅದು ಅಷ್ಟೊಂದು ಅಪಾಯಕಾರಿಯೇ? - Mahanayaka
12:14 AM Tuesday 10 - December 2024

ಏನಿದು ಹಲಾಲ್ ಮಾಂಸ?  ಅದು ಅಷ್ಟೊಂದು ಅಪಾಯಕಾರಿಯೇ?

halal
31/03/2022

ರಾಜ್ಯಾದ್ಯಂತ ಹಲಾಲ್ ಮಾಂಸದ ವಿರುದ್ಧ ಬಿಜೆಪಿ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇನ್ನೊಂದೆಡೆ, ಬಿಜೆಪಿ ಪರ ಸ್ವಾಮೀಜಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಮೂಲಕ ಕೋಮು ದ್ವೇಷದ ಆರಂಭಿಸಿದ್ದಾರೆ. ಈ ಎಲ್ಲ ಘಟನೆಗಳನ್ನು ರಾಜ್ಯದ ಜವಾಬ್ದಾರಿಯುತ ಸರ್ಕಾರ ನೋಡಿಕೊಂಡು ಸುಮ್ಮನಿದ್ದು, ಮುಂದಿನ ಚುನಾವಣೆಯಲ್ಲಿ ಆಗಬಹುದಾಗಿರುವ ಲಾಭದ ಲೆಕ್ಕಾಚಾರದಲ್ಲಿ ತೊಡಗಿದೆ.

ವಾಸ್ತವವಾಗಿ ಹಲಾಲ್ ಎಂದರೆ ಪ್ರಾಣಿಗಳನ್ನು ಕೊಲ್ಲುವ ಒಂದು ಕ್ರಮ ಅಷ್ಟೆ. ಬಿಜೆಪಿ ಪರ ಸಂಘಟನೆಗಳು ಆರೋಪಿಸುತ್ತಿರುವಂತೆ, ದೇವರಿಗೆ ನೈವೇದ್ಯ ಇಡುವ ಕ್ರಮವೂ ಇದಲ್ಲ. ಯಾಕೆಂದರೆ, ಇಸ್ಲಾಮ್ ನಲ್ಲಿ ದೇವರಿಗೆ ರಕ್ತವನ್ನು ನೈವೇದ್ಯ ಇಡುವ ಸಂಪ್ರದಾಯ ಇಲ್ಲವೇ ಇಲ್ಲ.

ಮನುಷ್ಯ ಪ್ರಾಕೃತಿಕವಾಗಿ ಮಾಂಸಹಾರಿಯೂ ಹೌದು, ಸಸ್ಯಹಾರಿಯೂ ಹೌದು. ಮಾಂಸಾಹಾರಿಗಳು ಒಂದು ಪ್ರಾಣಿಯನ್ನೋ ಅಥವಾ ಕೋಳಿಯನ್ನೋ ವಧಿಸದೇ ತಿನ್ನಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚು ಹಿಂಸೆ ನೀಡದೇ ಕೊಲ್ಲುವ ಒಂದು ಕ್ರಮವೇ ಹಲಾಲ್ ಎನ್ನುವುದಾಗಿದೆ.

ಹಲಾಲ್ ಪ್ರಕಾರ, ಪ್ರಾಣಿಯನ್ನು ವಧಿಸುವ ಕತ್ತಿ ಅತ್ಯಂತ ಹರಿತವಾಗಿರಬೇಕು. ಕೊರಳಿನ ರಕ್ತನಾಳ ಮತ್ತು ಶ್ವಾಸನಾಳಗಳನ್ನು ತುಂಡರಿಸುವ ಮೂಲಕ ಒಂದೇ ಬಾರಿಗೆ ಪ್ರಾಣಿಯ ಸಾವು ಸಂಭವಿಸಬೇಕು. ಈ ನಾಳಗಳನ್ನು ತುಂಡರಿಸಿದ ವೇಳೆ ರಕ್ತವೆಲ್ಲವೂ ಸಂಪೂರ್ಣವಾಗಿ ಹೊರ ಹರಿಯುತ್ತದೆ. ಇದರಿಂದಾಗಿ ರಕ್ತದಲ್ಲಿರುವ ರೋಗಾಣುಗಳೆಲ್ಲವೂ ಮಾಂಸದಿಂದ ರಕ್ತದ ಬೇರ್ಪಟ್ಟು ಸ್ವಚ್ಛವಾದ, ತಿನ್ನಲು ಯೋಗ್ಯವಾದ ಮಾಂಸ ದೊರಕುತ್ತದೆ.

ಕೋಳಿಯನ್ನೋ ಪ್ರಾಣಿಗಳನ್ನೋ ನೇರವಾಗಿ ತಲೆಯನ್ನು ಕತ್ತರಿಸಿ ಕೊಲ್ಲುವುದರಿಂದ ರಕ್ತವು ಮಾಂಸದಲ್ಲಿ ಹೆಪ್ಪುಗಟ್ಟುತ್ತದೆ. ರಕ್ತದಲ್ಲಿರುವ ರೋಗಾಣುಗಳು ಮಾಂಸದಲ್ಲಿ ಉಳಿದರೆ, ಅದನ್ನು ಸೇವಿಸುವ ಮನುಷ್ಯನ ದೇಹಕ್ಕೆ ರೋಗಾಣುಗಳ ಪ್ರವೇಶ ಕೂಡ ಆಗಬಹುದು.

ಹಲಾಲ್ ಮಾಡಿದ ಮಾಂಸವು ಹೆಚ್ಚು ಕಾಲ ಕೆಡದೇ ಹಾಗೆಯೇ ಇರುತ್ತದೆ. ಮೆದುಳಿಗೆ ನೋವನ್ನು ತಿಳಿಯ ಪಡಿಸುವ ನರವನ್ನೇ ಕತ್ತರಿಸುವುದರಿಂದಾಗಿ ಪ್ರಾಣಿಗೆ ಹತ್ಯೆಯ ನೋವು ತಿಳಿಯುವುದಿಲ್ಲ. ಆ ಬಳಿಕ ಪ್ರಾಣಿಯ ಒದ್ದಾಟ ಏನಿದ್ದರೂ ಅದು ಸ್ನಾಯುಗಳ ಚಲನೆಯಿಂದಾಗಿರುತ್ತದೆ.

ಯಾವುದೇ ಒಂದು ಆಚರಣೆಗಳಿರಲಿ ಅಥವಾ ಆಹಾರ ಪದ್ಧತಿಗಳಿರಲಿ, ಜನಾಂಗೀಯದ್ವೇಷದಿಂದ ಮಹತ್ವ ಕಳೆದುಕೊಳ್ಳಬಾರದು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಸಂಘಟನೆಗಳು ಹರಿಯಬಿಟ್ಟಿರುವ ಪೋಸ್ಟ್ ಗಳು ಸತ್ಯಕ್ಕೆ ದೂರವಾದ ವಿಚಾರವಾಗಿದೆ.

ಇನ್ನೂ ರಾಜ್ಯ ಸರ್ಕಾರವು ಜನಾಂಗೀಯ ದ್ವೇಷಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತಿರುವುದು, ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ. ಸರ್ಕಾರದ ಜವಾಬ್ದಾರಿಯುತವಾಗಿರುವ ಸಚಿವರುಗಳೇ ಇಂತಹ ಸೂಕ್ಷ್ಮ ವಿಚಾರಗಳಿಗೆ ಉರಿಯುವ ಬೆಂಕಿಗೆ ತುಪ್ಪು ಸುರಿಯುವ ಕೆಲಸ ಮಾಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೀಸಲಾತಿ ಕಲ್ಪಿಸದೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯ: ಸಿದ್ದರಾಮಯ್ಯ

ಜ್ಯೋತಿಷಿ ಮನೆ ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಗಂಡಸ್ತನ ಪದ ಬಳಕೆ: ಎಚ್‌.ಡಿ.ಕುಮಾರಸ್ವಾಮಿ ವಿಷಾದ

ಹೆಂಡತಿ ಮೇಲಿನ ವ್ಯಾಮೋಹ: ಹೆತ್ತ ತಾಯಿಯನ್ನೇ ಕೊಂದ ಮಗ

ದುಲ್ಕರ್ ಸಲ್ಮಾನ್ ಮೇಲಿನ ನಿಷೇಧವನ್ನು  ಹಿಂಪಡೆದ ಫಿಯೋಕ್

ಇತ್ತೀಚಿನ ಸುದ್ದಿ