ನಟಿ ರಮ್ಯಾ—ಎಸ್.ಎಂ.ಕೃಷ್ಣ ನಡುವಿನ ನಂಟೇನು?
ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಇಂದು ನಿಧನರಾಗಿದ್ದಾರೆ. ಇದೇ ವೇಳೆ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಅವರು ಸದಾಶಿವನಗರದಲ್ಲಿ ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ರಮ್ಯಾ ಹಾಗೂ ಎಸ್.ಎಂ.ಕೃಷ್ಣ ನಡುವೆ ಅವಿನಾಭಾವ ನಂಟಿದೆ. ಈ ಆಪ್ತತೆ ರಮ್ಯಾ ಅವರ ತಂದೆಯ ಕಾಲದಿಂದಲೂ ಬಂದಿರುವ ನಂಟಾಗಿದೆ. ರಮ್ಯಾ ಅವರನ್ನು ಎಸ್.ಎಂ.ಕೃಷ್ಣ ಅವರೇ ರಾಜಕೀಯಕ್ಕೆ ಕರೆತಂದಿದ್ದರು.
ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ ಎಸ್.ಎಂ.ಕೃಷ್ಣ ಅವರಿಗೆ ಅತ್ಯಾಪ್ತರಾಗಿದ್ದರು. ಮಂಡ್ಯ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತೆಯಾಗಿ ರಂಜಿತಾ ಅವರು ಸಾಕಷ್ಟು ಪ್ರಭಾವ ಹೊಂದಿದ್ದರು. ರಮ್ಯಾ ಅವರ ತಂದೆ ಆರ್.ಟಿ.ನಾರಾಯಣ್ ಕೂಡ ರಾಜಕೀಯದಲ್ಲಿ ಪ್ರಭಾವಿಯಾಗಿದ್ದರು. ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ರಮ್ಯಾ ತಂದೆ ಆರ್.ಟಿ.ನಾರಾಯಣ್ ಕ್ಯಾಬಿನೆಟ್ ಪ್ರಮುಖ ಸದಸ್ಯರು ಆಗಿದ್ದರು.
ರಮ್ಯಾ ಅವರ ತಂದೆ ಹಾಗೂ ತಾಯಿಗೆ ಆಪ್ತರಾಗಿದ್ದ ಎಸ್.ಎಂ.ಕೃಷ್ಣ ಅವರು ರಮ್ಯಾ ಅವರ ರಾಜಕೀಯ ಬೆಳವಣಿಗೆಯಲ್ಲಿ ಜೊತೆ ನಿಂತಿದ್ದರು. ಹೀಗಾಗಿ ರಮ್ಯಾ ಅವರಿಗೆ ಎಸ್.ಎಂ.ಕೃಷ್ಣ ಅವರ ಬಗ್ಗೆ ಗೌರವವಿದೆ. ಜೊತೆಗೆ ಅವರ ನಿಧನದ ವಾರ್ತೆ ತೀವ್ರ ದುಃಖ ತಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: