ಸದಾ ಹಿಂಸಿಸುವ ಮೈಕೈ ನೋವಿಗೆ ಶಾಶ್ವತ ಪರಿಹಾರ ಏನು?
ಸದ್ಯ ಬಹಳಷ್ಟು ಜನರನ್ನು ಬಾಧಿಸುತ್ತಿರುವ ಸಮಸ್ಯೆ ಬಾಡಿ ಪೈನ್ ಅಥವಾ ಮೈಕೈ ನೋವು. ನಮ್ಮ ದೇಹದಲ್ಲಿ ಕೆಲವೊಮ್ಮೆ ಯಾವುದೇ ಕಾರಣವೇ ಇಲ್ಲದೇ ನೋವುಗಳು ಕಾಣಿಸಿಕೊಳ್ಳುತ್ತವೆ. ನಮ್ಮ ದೇಹದ ಕೆಲವು ಭಾಗಗಳಲ್ಲಿ ಹಿಡಿದಿಟ್ಟ ರೀತಿಯಲ್ಲಿ ನಮಗೆ ನೋವುಗಳು ಆರಂಭವಾಗುತ್ತವೆ.
ಬೆನ್ನು ನೋವು, ಸೊಂಟ ನೋವು, ಕುತ್ತಿಗೆ ನೋವು, ಭುಜದ ಭಾಗಗಳಲ್ಲಿ ಮೊದಲಾದ ಭಾಗಗಳಲ್ಲಿ ಕೆಲವೊಮ್ಮೆ ಕಾರಣವಿಲ್ಲದೇಯೇ ನೋವುಗಳು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ವಿಪರೀತವಾದ ಮೈಸೆಳೆತದ ಅನುಭವವೂ ಆಗುತ್ತದೆ.
ಇಂತಹ ಸಂದರ್ಭದಲ್ಲಿ ಬಹುತೇಕ ಜನರು ನೋವಿನ ಮಾತ್ರೆಗಳನ್ನು ನುಂಗಿ ದೊಡ್ಡ ತಪ್ಪನ್ನೇ ಮಾಡುತ್ತಾರೆ ಮತ್ತು ಇದೇ ಈ ಸಮಸ್ಯೆಗೆ ಪರಿಹಾರ ಅಂದುಕೊಂಡು ಪದೇ ಪದೇ ಈ ರೀತಿಯಲ್ಲಿ ಮಾತ್ರೆಗಳನ್ನು ನುಂಗುತ್ತಾರೆ ಇದರಿಂದಾಗಿ ಮುಂದೆ ದೊಡ್ಡ ಅನಾರೋಗ್ಯ ಸಮಸ್ಯೆಗಳಿಗೆ ಸಿಗುತ್ತಾರೆ.
ಆದರೆ, ಮೈಕೈ ನೋವು ಕಾಣಿಸಿಕೊಂಡಾಗ ಅದನ್ನು ಸರಳವಾಗಿ ಪರಿಹರಿಸಿಕೊಳ್ಳಲು ಮಾರ್ಗವಿದೆ. ನೀರನ್ನು ಹದವಾಗಿ ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಬೇಕು ಬಳಿ ನಮ್ಮ ದೇಹದ ಯಾವ ಭಾಗದಲ್ಲಿ ನೋವು ಕಾಣಿಸಿಕೊಂಡಿದೆಯೋ ಆ ಭಾಗವನ್ನು ಉಪ್ಪು ನೀರಿನಲ್ಲಿ ನೆನೆಸಬೇಕು. ಅಥವಾ ಟವಲ್ ಗಳನ್ನು ಬಳಸಿಯೂ ನೆನೆಸಬಹುದು.
ಇಡೀ ಮೈಕೈ ನೋವು ಆರಂಭವಾದರೆ, ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ, ತಲೆಯಿಂದ ಕೆಳಗೆ ಸ್ನಾನ ಮಾಡಬಹುದಾಗಿದೆ. ಉಪ್ಪು ನೀರನ್ನು ತಲೆಗೆ ಹಾಕಬಾರದು. ಮೈಕೈ ನೋವಿಗೆ ಬಿಸಿ ನೀರು ಹಾಗೂ ಉಪ್ಪಿನ ಪ್ರಯೋಗ ಉತ್ತಮವಾದದ್ದು, ಇದರಿಂದ ನಮ್ಮ ದೇಹಕ್ಕೆ ಯಾವುದೇ ತೊಂದರೆಯಿಲ್ಲ. ಕೆಲವರಿಗೆ ಒಂದೆರಡು ದಿನಗಳಲ್ಲೇ ಮೈಕೈ ನೋವುಗಳು ಹೋಗುತ್ತವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಪೆಟ್ರೋಲ್, ಡೀಸೆಲ್ ಗೆ ನೀರು ಬೆರಕೆ | ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಗ್ರಾಹಕರಿಂದ ತೀವ್ರ ಆಕ್ರೋಶ
ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು ಎಂದ ಉತ್ತರ ಪ್ರದೇಶ ಸಚಿವ!
“ಪಿಎಂ ಕೇರ್ಸ್ ಫಂಡ್ ಗೆ ಅಪ್ಪ-ಅಮ್ಮನೇ ಇಲ್ಲದಂತಾಗಿದೆ!”
ತಾತಾ ಆದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ | ದೇವೇಗೌಡ್ರ ಮನೆಯಲ್ಲಿ ಸಂಭ್ರಮ
ಮನಮೋಹನ್ ಸಿಂಗ್ ವಿಮಾನದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿದ್ದರು | ಮೋದಿ ಫೋಟೋಗೆ ಕಾಂಗ್ರೆಸ್ ತಿರುಗೇಟು