ಏನಿದು ಟೂಲ್ ಕಿಟ್? | ದಿಶಾ ರವಿ ಅವರ ಬಂಧನ ಯಾಕೆ? - Mahanayaka
4:00 AM Thursday 14 - November 2024

ಏನಿದು ಟೂಲ್ ಕಿಟ್? | ದಿಶಾ ರವಿ ಅವರ ಬಂಧನ ಯಾಕೆ?

16/02/2021

ದೆಹಲಿ: ಬೆಂಗಳೂರು ಮೂಲದ ದಿಶಾ ಅವರ ಬಂಧನದ ವಿಚಾರವಾಗಿ ರಾಜ್ಯ-ದೇಶ-ವಿದೇಶಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಗ್ರೇಟಾ ಥನ್​ಬರ್ಗ್​ರ ಟೂಲ್​ ಕಿಟ್​ ಪ್ರಕರಣದಲ್ಲಿ ಲಿಂಕ್​ ಹೊಂದಿರುವ ಮತ್ತೊಬ್ಬ ಪರಿಸರ ಕಾರ್ಯಕರ್ತೆ 22 ವರ್ಷದ ದಿಶಾ ರವಿ ಅವರನ್ನು 5 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಅಷ್ಟಕ್ಕೂ ಈ ಟೂಲ್ ಕಿಟ್ ಅಂದ್ರೇನು? ಇದನ್ನು ಯಾಕೆ ಬಳಸಲಾಗುತ್ತದೆ?

ಒಂದು ವಿಷಯದ ಬಗ್ಗೆ  ಜಾಗೃತಿ ಮೂಡಿಸಲು ರಚಿಸಲಾಗುವ ಮಾರ್ಗ ಸೂಚಿಯೇ ಟೂಲ್ ಕಿಟ್ ಆಗಿದೆ. ಟೂಲ್​ ಕಿಟ್​ ನಲ್ಲಿ ಭಾರತದಲ್ಲಿ ನಡೆಯುತ್ತಿರೋ ರೈತ ಪ್ರತಿಭಟನೆ ಬಗ್ಗೆ ಏನೂ ಮಾಹಿತಿ ಇಲ್ಲದವರು ಪರಿಸ್ಥಿತಿಯನ್ನ ಅರಿತುಕೊಂಡು ತಮ್ಮದೇ ಆದ ವಿಶ್ಲೇಷಣೆಯ ಆಧಾರದ ಮೇಲೆ ರೈತರನ್ನ ಹೇಗೆ ಬೆಂಬಲಿಸಬೇಕು ಅನ್ನೋ ನಿರ್ಧಾರ ತೆಗೆದುಕೊಳ್ಳುವ ವಿಚಾರಗಳಿದ್ದವು ಎಂದು ಹೇಳಲಾಗುತ್ತದೆ.

ಈ ಟೂಲ್ ಕಿಟ್ ವಿಚಾರದಲ್ಲಿ ಪೊಲೀಸರು ದಿಶಾ ರವಿ ಅವರನ್ನು ಬಂಧಿಸಿದ್ದಾರೆ. ನವೆಂಬರ್ ನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯ ಪಿನ್ ಟು ಪಿನ್ ಮಾಹಿತಿ ಈ ಟೂಲ್ ಕಿಟ್ ನಲ್ಲಿದ್ದು, ಇದನ್ನು ಪ್ರಪಂಚದಾದ್ಯಂತ ಜನ ನೋಡಲು ಸಾಧ್ಯವಾಗುವಂತೆ ಮಾಡಲಾಗಿದೆ. ಇದಕ್ಕಾಗಿ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಇದೊಂದು ಬಂಧಿಸುವಂತಹ ತಪ್ಪೇ ಅಲ್ಲ ಎಂದು ಇದಕ್ಕಾಗಿ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದೆ.

ಟೂಲ್ ಕಿಟ್ ವಿಚಾರದಲ್ಲಿ ದಿಶಾ ರವಿ ಖಲಿಸ್ತಾನಿ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಪರಿಸರ ಪ್ರೇಮಿ ಆಗಿರುವ ದಿಶಾ ರೈತರ ಪ್ರತಿಭಟನೆಯನ್ನು ಬೆಂಬಲಿಸಲು ಈ ಕೆಲಸ ಮಾಡಿದ್ದಾರೆ. ಅವರು ಮುಗ್ಧೆ ಎಂದು ರೈತ ಸಂಘಟನೆಗಳು ಸಮಾನ ಮನಸ್ಕರು ಅಭಿಪ್ರಾಯಪಟ್ಟಿದ್ದಾರೆ.




ಇತ್ತೀಚಿನ ಸುದ್ದಿ