ಟೆಸ್ಟ್ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ದಿಢೀರ್‌ ರಾಜೀನಾಮೆ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು? - Mahanayaka

ಟೆಸ್ಟ್ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ದಿಢೀರ್‌ ರಾಜೀನಾಮೆ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

sourav ganguly
16/01/2022

ನವದೆಹಲಿ: ಟೀಂ ಇಂಡಿಯಾದ ಟೆಸ್ಟ್‌ ತಂಡದ ನಾಯಕ ಸ್ಥಾನಕ್ಕೆ ವಿರಾಟ್‌ ಕೊಹ್ಲಿ ನಿನ್ನೆ ದಿಢೀರ್‌ ರಾಜೀನಾಮೆ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕೊಹ್ಲಿ ಈ ನಿರ್ಧಾರ ಅವರ ವೈಯಕ್ತಿಕವಾಗಿದೆ ಎಂದು ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸೌರವ್‌ ಗಂಗೂಲಿ, ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್‌ ತಂಡ ಎಲ್ಲಾ ಮಾದರಿಗಳಲ್ಲಿ ವೇಗವಾಗಿ ಬಹು ಎತ್ತರಕ್ಕೆ ದಾಪುಗಾಲು ಇಟ್ಟಿದೆ. ಟೆಸ್ಟ್‌ ತಂಡಕ್ಕೆ ರಾಜೀನಾಮೆ ಘೋಷಣೆ ಮಾಡಿರುವುದು ಅವರ ವೈಯಕ್ತಿಕ ನಿರ್ಧಾರವಾಗಿದೆ. ಕೊಹ್ಲಿ ಅವರ ಈ ನಿರ್ಧಾರವನ್ನು ಬಿಸಿಸಿಐ ಅಗಾಧವಾಗಿ ಗೌರವಿಸುತ್ತದೆ ಎಂದಿದ್ದಾರೆ.

ಭವಿಷ್ಯದಲ್ಲಿ ಟೀಂ ಇಂಡಿಯಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರೊಬ್ಬ ಶ್ರೇಷ್ಠ ಆಟಗಾರ. ವೆಲ್‌ ಡನ್‌ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಟ್ವೀಟ್‌ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರಚೋದನಾಕಾರಿ ಭಾಷಣ: ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಬಂಧನ

ಚುನಾವಣಾ ಆಯೋಗದಿಂದ ಜ. 22ರವರೆಗೆ ರೋಡ್ ಶೋ, ರ್‍ಯಾಲಿ ಮೇಲಿನ ನಿಷೇಧ ವಿಸ್ತರಣೆ

ಹೈದರಾಬಾದ್‌: ಐತಿಹಾಸಿಕ ಸಿಕಂದರಾಬಾದ್ ಕ್ಲಬ್‌ ಬೆಂಕಿಗಾಹುತಿ; ಕೋಟ್ಯಂತರ ರೂ. ನಷ್ಟ

ಹೈದರಾಬಾದ್‌: ಐತಿಹಾಸಿಕ ಸಿಕಂದರಾಬಾದ್ ಕ್ಲಬ್‌ ಬೆಂಕಿಗಾಹುತಿ; ಕೋಟ್ಯಂತರ ರೂ. ನಷ್ಟ

ಇಬ್ಬರು ವಕೀಲರಿಗೆ 2 ತಿಂಗಳು ಜೈಲು ಶಿಕ್ಷೆ ನೀಡಿದ ಹೈಕೋರ್ಟ್‌

ಚಲಿಸುತ್ತಿದ್ದ ಬಸ್ಸಿನಲ್ಲೇ  ಮೂರ್ಛೆ ಹೋದ ಚಾಲಕ: ಜನರ ಪ್ರಾಣ ಉಳಿಸಿದ ಮಹಿಳೆ

ಇತ್ತೀಚಿನ ಸುದ್ದಿ