ಹೃದಯಾಘಾತಕ್ಕೂ ಮೊದಲು ರವಿ ಬೆಳಗೆರೆ ಕಚೇರಿಯಲ್ಲಿ ಏನೆಲ್ಲ ನಡೆದಿತ್ತು?

13/11/2020

ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ತಮ್ಮ ಪದ್ಮನಾಭ ಕಚೇರಿಯಲ್ಲಿ ರವಿ ಬೆಳಗೆರೆ ರಾತ್ರಿ 12 ಕಳೆದರೂ ಕುಳಿತಿದ್ದರಂತೆ. ತಮ್ಮ ಕೊನೆಯ ಕ್ಷಣಗಳನ್ನು ರವಿ ಬೆಳಗೆರೆ ಅವರು ತಮ್ಮ ಪದ್ಮನಾಭ ಕಚೇರಿಯಲ್ಲಿಯೇ ಕಳೆದಿದ್ದಾರೆ.

ರವಿ ಬೆಳಗೆರೆ ಅವರ ಪುತ್ರ ಕರ್ಣ ಹೇಳುವಂತೆ, ಕಳೆದ ಮೂರು ದಿನಗಳ ಹಿಂದೆಯಷ್ಟೇ ರವಿ ಬೆಳಗೆರೆ ತಮ್ಮ ಪುತ್ರನ ಜೊತೆಗೆ ಮಾತನಾಡಿದ್ದರಂತೆ. “ನಾನು ನಿಮ್ಮ ಜೊತೆಗೆ ಇದ್ದೇನೆ ಕಣೋ” ಎಂದು ರವಿ ಬೆಳಗೆರೆ ಅವರು ಪುತ್ರನಿಗೆ ಆ ಸಂದರ್ಭದಲ್ಲಿ ಹೇಳಿದ್ದರಂತೆ.

ರವಿ ಬೆಳಗೆರೆ ಅವರಿಗೆ ಡಯಾಬಿಟಿಸ್ ಇತ್ತು. ಹೀಗಾಗಿ ಕಾಲುಗಳು ತೀವ್ರವಾಗಿ ಅವರಿಗೆ ನೋವು ನೀಡುತ್ತಿತ್ತಂತೆ. ಇವೆಲ್ಲ ಇದ್ದರೂ ತಮ್ಮ ಪ್ರಾರ್ಥನಾ ಶಾಲೆಯ ಬಗ್ಗೆ ಅವರಿಗೆ ಹೆಚ್ಚು ಚಿಂತೆ ಇತ್ತು ಎಂದು ಕರ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಿನ್ನೆ ತಡರಾತ್ರಿ 12:15ರ ವೇಳೆಗೆ ರವಿ ಬೆಳಗೆರೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ವಿಷಯ ತಿಳಿದು ಪುತ್ರ ಕರ್ಣ ಸ್ಥಳಕ್ಕೆ ಓಡಿದ್ದು, ಆಸ್ಪತ್ರೆಗೆ ಸಾಗಿಸಲು ಸಜ್ಜಾಗುತ್ತಿದ್ದಂತೆಯೇ, ರವಿ ಬೆಳಗೆರೆ ಅದಾಗಲೇ ನಿಧರಾಗಿದ್ದರು ಎಂದು ಪುತ್ರ ತಿಳಿಸಿದ್ದಾರೆ.

ರವಿ ಬೆಳಗೆರೆ ಅವರ ಅಂತಿಮ ದರ್ಶನ ತಮ್ಮ ಪ್ರಾರ್ಥನಾ ಶಾಲೆಯ ಮೈದಾನದಲ್ಲಿಯೇ ನಡೆಯಲಿದೆ.  ಬೆಳಗ್ಗೆ 9 ಗಂಟೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 4 ಗಂಟೆಯೊಳಗೆ ಅವರ ಅಂತ್ಯಕ್ರಿಯೆ ಬನಶಂಕರಿ  ಚಿತಾಗಾರದಲ್ಲಿ ನಡೆಯಲಿದೆ.

ಇತ್ತೀಚಿನ ಸುದ್ದಿ

Exit mobile version