ಇಂದು ಮಣಿಪುರದಲ್ಲಿ ಏನಾಗುತ್ತಿದೆಯೋ ಅದೆಲ್ಲವನ್ನು ಸೃಷ್ಟಿಸಿದ್ದು ಕಾಂಗ್ರೆಸ್: ಬಿರೇನ್ ಸಿಂಗ್ ಹೊಸ ವಾದ

ಮಣಿಪುರದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಮಾರ್ಗದರ್ಶನವನ್ನು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಅವರ ಮಾತುಗಳನ್ನು ಕೇಳಿದ ನಂತರ ರಾಜ್ಯದಲ್ಲಿ ಶಾಂತಿ ನೆಲೆಸಿದೆ ಎಂದು ಹೇಳಿದ್ದಾರೆ.
ನಾವು ಅವರ ಸಲಹೆಯನ್ನು ಯಾವಾಗಲೂ ತೆಗೆದುಕೊಳ್ಳುತ್ತೇವೆ. ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಹೇಳಿಕೆಗಳನ್ನು ಕೇಳಿದ ನಂತರ ಮಣಿಪುರದಲ್ಲಿ ಶಾಂತಿ ನೆಲೆಸಿದೆ. ಸ್ಥಳಾಂತರಗೊಂಡ ಜನರ ಪುನರ್ ವಸತಿಗಾಗಿ ಇದು ವಾಡಿಕೆಯ ಕೆಲಸವಾಗಿದೆ. ಗೃಹ ಸಚಿವರ ಸಲಹೆ ಪಡೆಯಲು ನಾವು ಇಲ್ಲಿದ್ದೇವೆ ಎಂದು ಬಿರೇನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅವರು ಲಡಾಖ್ ನಲ್ಲಿದ್ದರೆ ಲಡಾಖ್ ಬಗ್ಗೆ ಮಾತನಾಡಬೇಕು ಎಂದು ಹೇಳಿದರು.
ಲಡಾಖ್‌ನಲ್ಲಿದ್ದಾಗ ರಾಹುಲ್ ಗಾಂಧಿ ಮಣಿಪುರದ ಬಗ್ಗೆ ಹೇಗೆ ಯೋಚಿಸಿದರು..? ನೀವು ಲಡಾಖ್ ಗೆ ಹೋಗುತ್ತಿದ್ದರೆ ಲಡಾಖ್ ಬಗ್ಗೆ ಮಾತನಾಡಿ. ಇಂದು ಮಣಿಪುರದಲ್ಲಿ ಏನಾಗುತ್ತಿದೆಯೋ ಅದೆಲ್ಲವೂ ಕಾಂಗ್ರೆಸ್ ಸೃಷ್ಟಿಸಿದ್ದು. ಮಾನವ ಜೀವನದ ಮೇಲೆ ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು.
ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ ಪ್ರಧಾನಿ ಮೋದಿ, ಸಂಘರ್ಷ ಪೀಡಿತ ಮಣಿಪುರದಲ್ಲಿ ಶಾಂತಿಗಾಗಿ ಮನವಿ ಮಾಡಿದ್ದರು. ದೇಶಾದ್ಯಂತ ಜನರು ಈಶಾನ್ಯ ರಾಜ್ಯದ ಜನರೊಂದಿಗೆ ನಿಲ್ಲುತ್ತಾರೆ ಎಂದು ಬಿರೇನ್ ಸಿಂಗ್ ಹೇಳಿದರು.