ಪ್ರೇಮಿಗಳ ದಿನದಂದು ಟಾಟಾ ಗ್ರೂಪ್ ಮೊಬೈಲ್ ಗಿಫ್ಟ್ ನೀಡುತ್ತದೆಯೇ? | ಈ ಸುದ್ದಿ ಸತ್ಯವೇ? ಇಲ್ಲಿದೆ ಮಾಹಿತಿ - Mahanayaka

ಪ್ರೇಮಿಗಳ ದಿನದಂದು ಟಾಟಾ ಗ್ರೂಪ್ ಮೊಬೈಲ್ ಗಿಫ್ಟ್ ನೀಡುತ್ತದೆಯೇ? | ಈ ಸುದ್ದಿ ಸತ್ಯವೇ? ಇಲ್ಲಿದೆ ಮಾಹಿತಿ

04/02/2021

ನವದೆಹಲಿ: ಫೆ.14ರ ಪ್ರೇಮಿಗಳ ದಿನದಂದು ಟಾಟಾ ಕಂಪೆನಿಯು ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಂಡಿದೆ ಎಂಬ ಸಂದೇಶವೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಇದರ ಸತ್ಯಾಂಶ ಇದೀಗ ಬಯಲಾಗಿದೆ.

ಟಾಟಾದ ವೆಬ್ ಸೈಟ್ ನಂತೆ ಕಂಡು ಬರುವ ಲಿಂಕ್ ನಲ್ಲಿ “ ಈ ಪ್ರಶ್ನೆಗೆ ಉತ್ತರಿಸಿ, ಪ್ರೇಮಿಗಳ ದಿನದ ಉಡುಗೊರೆಯನ್ನು ಪಡೆಯಿರಿ. ಈ ರಸಪ್ರಶ್ನೆಯಲ್ಲಿ ಭಾಗವಹಿಸಿ ಮೊಬೈಲ್ ಫೋನ್ ಗೆಲ್ಲಿ,  ನನ್ನ ಸ್ನೇಹಿತ ಈಗಾಗಲೇ ಈ ಬಹುಮಾನ ಪಡೆದಿದ್ದಾನೆ. ಬನ್ನಿ ಉಡುಗೊರೆ ಪಡೆಯಿರಿ” ಎಂದು ಸಂದೇಶ ನೀಡಲಾಗಿದೆ.

ಈ ಲಿಂಕ್ ಗೆ ಕ್ಲಿಕ್ ಮಾಡಿದ ಬಳಿಕ ಹಲವು ಪ್ರಶ್ನೆಗಳಿಗೆ ವೆಬ್ ಸೈಟ್ ಉತ್ತರ ಕೇಳುತ್ತದೆ. ಕೊನೆಗೆ ಗಿಫ್ಟ್ ಪಡೆಯಬೇಕಾದರೆ, ವಾಟ್ಸಾಪ್ ನಲ್ಲಿ ನಿಮ್ಮ 5 ಗ್ರೂಪ್ ಗಳು ಅಥವಾ 20 ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಹೇಳುತ್ತದೆ. ನೀವು ಹಂಚಿಕೊಂಡ ತಕ್ಷಣವೇ ಮತ್ತಷ್ಟು ಜನರು ಈ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಹೀಗಾಗಿ ಈ ಲಿಂಕ್ ವ್ಯಾಪಕವಾಗಿ ವಾಟ್ಸಾಪ್ ಗಳಲ್ಲಿ ವೈರಲ್ ಆಗುತ್ತದೆ.

ವಾಸ್ತವವಾಗಿ ಇದು ಟಾಟಾ ಗ್ರೂಪ್ ನವರ ಯಾವುದೇ ಸ್ಪರ್ಧೆ ಅಲ್ಲ. ಈ ಬಗ್ಗೆ ಟಾಟಾ ಗ್ರೂಪ್ ನವರು ಕೂಡ ಇದಕ್ಕೆ ಸ್ಷಷ್ಟಣೆ ನೀಡಿ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಲಿಂಕ್ ಗಳನ್ನು ನಾವು ನೀಡಿಲ್ಲ. ಇದರ ವಿರುದ್ಧ ಜಾಗಕರೋಕರಾಗಿ, ಯಾವುದೇ ಲಿಂಕ್ ಗಳನ್ನು ಕ್ಲಿಕ್ ಮಾಡುವಾಗ ಅದರ ಮೂಲಗಳನ್ನು ಪರಿಶೀಲನೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದೆ.

ಇತ್ತೀಚಿನ ಸುದ್ದಿ