ವಾಟ್ಸಾಪ್ ನಲ್ಲಿ ಕ್ಯಾಶ್ ಬ್ಯಾಕ್ ಸಿಗಬೇಕಾದರೆ ಏನು ಮಾಡಬೇಕು ಗೊತ್ತಾ? - Mahanayaka
12:56 AM Tuesday 4 - February 2025

ವಾಟ್ಸಾಪ್ ನಲ್ಲಿ ಕ್ಯಾಶ್ ಬ್ಯಾಕ್ ಸಿಗಬೇಕಾದರೆ ಏನು ಮಾಡಬೇಕು ಗೊತ್ತಾ?

whatsapp cashback
30/04/2022

ವಾಟ್ಸಾಪ್ ನಲ್ಲಿ ಹಣ ಕಳುಹಿಸುವ ಮತ್ತು ಸ್ವೀಕರಿಸುವ ಅಪ್ಲಿಕೇಶನ್ ನ್ನು ಪರಿಚಯಿಸಲಾಗಿದ್ದರೂ ಸಹ ಇದು ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ. Google Pay, Paytm ಮತ್ತು Phone Payಯ ಪ್ರಾಬಲ್ಯದ ಮಧ್ಯೆ ವಾಟ್ಸಾಪ್ ಮಂಕಾಗಿರುವುದು ನಿಜ.

ಆದರೆ, ಇದೀಗ ಹಣದ ವಹಿವಾಟುಗಳಿಗೆ ವಾಟ್ಸಾಪ್ ಬಳಕೆದಾರರನ್ನು ಹೆಚ್ಚಳ ಮಾಡುವ ಉದ್ದೇಶದಿಂದ ವಾಟ್ಸಾಪ್ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಪಾವತಿ ವೈಶಿಷ್ಠ್ಯವನ್ನು ಪರಿಚಯಿಸಿದೆ.  ವಾಟ್ಸಾಪ್ ನಲ್ಲಿ ಕ್ಯಾಶ್ ಬ್ಯಾಕ್ ಆಫರ್ ವಿಭಿನ್ನವಾಗಿದ್ದು, ಗೂಗಲ್ ಪೇಗಿಂತ ವಿಭಿನ್ನ ನಿಯಮಗಳನ್ನು ಹಾಕಲಾಗಿದೆ.

ಗ್ರಾಹಕರು ತಮ್ಮ ಪ್ರತಿ ವಹಿವಾಟಿಗೆ 11 ರೂ. ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.  ಕನಿಷ್ಠ 30 ದಿನಗಳ ಕಾಲ ವಾಟ್ಸಾಪ್ ಬಳಕೆ ಮಾಡುತ್ತಿರುವ ಗ್ರಾಹಕರು ಕ್ಯಾಶ್ ಬ್ಯಾಕ್ ಗೆ ಅರ್ಹರಾಗಿದ್ದಾರೆ. ಹಣ ಪಾವತಿಯ ವೇಳೆ ಗ್ರಾಹಕರು  ಎಲ್ಲ ವಹಿವಾಟಿಗೂ ಕ್ಯಾಶ್ ಬ್ಯಾಕ್ ಪಡೆಯುವುದಿಲ್ಲ.  ಪಾವತಿಯ ವೇಲೆ ಪ್ರಚಾರದ ಬ್ಯಾನರ್ ಅಥವಾ ಜಾಹೀರಾತು ನೋಡುವವರಿಗೆ ಮಾತ್ರವೇ ಕ್ಯಾಶ್ ಬ್ಯಾಕ್ ಸಿಗುತ್ತದೆ. ವಾಟ್ಸಾಪ್ ವ್ಯಾಪಾರದ  ಪ್ರೊಫೈಲ್ ಹೊಂದಿರುವವರು ಕ್ಯಾಶ್ ಬ್ಯಾಕ್ ಪಡೆಯುವುದಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಊಟ ನಿರಾಕರಣೆ, ಏಸಿ ಇಲ್ಲದೇ ಚಡಪಡಿಸಿದ ದಿವ್ಯಾ ಹಾಗರಗಿ!

ಶಾಕಿಂಗ್ ನ್ಯೂಸ್: ಬಿಸಿಲಿನ ತಾಪಕ್ಕೆ ಸುಟ್ಟು ಹೋದ ಯುವಕನ ಬೆನ್ನು!

ಭಾರತ ಹಿಂದಿ ಭಾಷಿಗರದ್ದು, ಹಿಂದಿಯನ್ನು ಪ್ರೀತಿಸದವರು ಭಾರತ ಬಿಟ್ಟು ಹೋಗಿ:  ಉತ್ತರ ಪ್ರದೇಶ ಸಚಿವ

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರ ದಾರುಣ ಸಾವು

ಕೋಳಿಯನ್ನು ಜೀವಂತವಾಗಿ ಅಂಗಾಂಗ ಕಿತ್ತು ಕೊಂದ ಕೋಳಿ ಅಂಗಡಿ ಮಾಲಿಕ ಅರೆಸ್ಟ್!

ಇತ್ತೀಚಿನ ಸುದ್ದಿ