ಅನಾರೋಗ್ಯ ಇದ್ದರೂ ಕುಂದಲಿಲ್ಲ ಉತ್ಸಾಹ: ವೀಲ್ ಚೇರ್ ನಲ್ಲೇ ಸಂಸತ್ತಿಗೆ ಹಾಜರಾದ ಮಾಜಿ ಪ್ರಧಾನಿ

08/08/2023

ರಾಜ್ಯಸಭೆಯಲ್ಲಿ ಮಹತ್ವದ ದೆಹಲಿ ಸೇವಾ ಮಸೂದೆ-2023 ಕುರಿತು ಚರ್ಚೆ ನಡೆಯುತ್ತಿತ್ತು. ಇದೇ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೀಲ್ ಚೇರ್ ನಲ್ಲಿ ಸಂಸತ್ತಿಗೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (90) ದೆಹಲಿ ಸೇವಾ ಮಸೂದೆಯ ವಿರುದ್ಧ ಮತ ಚಲಾಯಿಸಲು ಕಾಂಗ್ರೆಸ್ ವಿಪ್‌ ನ ಭಾಗವಾಗಿ ಸೋಮವಾರ ರಾಜ್ಯಸಭೆಯಲ್ಲಿ ಭಾಗವಹಿಸಿದ್ದರು. ತಮ್ಮ ಅನಾರೋಗ್ಯದ ಕಾರಣ ಸಂಸತ್ತಿಗೆ ಹಾಜರಾಗುತ್ತಿಲ್ಲವೆಂದು ತಿಳಿಸಿದ್ದರು. ಆದರೂ ಅವರು ತಮ್ಮ 90ರ ಇಳಿ ವಯಸ್ಸಿನಲ್ಲೂ ಸಂಸತ್ ಗೆ ವೀಲ್ ಚೇರ್ ನಲ್ಲಿ ಹಾಜರಾದರು‌‌. ಇವರ ಉತ್ಸಾಹ ಕಂಡು ಎಲ್ಲರು ಖುಷಿಯಾಗಿದ್ದರು.

ದೆಹಲಿ ಸೇವಾ ಮಸೂದೆ ಚರ್ಚೆಯಾಗುತ್ತಿದ್ದ ವೇಳೆ ಸಿಂಗ್ ಅಲ್ಲಿಯೇ ಕುಳಿತು ಸಂಪೂರ್ಣ ಚರ್ಚೆಯಲ್ಲಿ ಆಲಿಸಿದ್ದಾರೆ. ವ್ಹೀಲ್ ಚೇರ್ ನಲ್ಲಿ ರಾಜ್ಯಸಭೆಗೆ ಹಾಜರಾದ ಮಾಜಿ ಪ್ರಧಾನಿ, ದೆಹಲಿ ಸೇವಾ ಮಸೂದೆ ವಿರುದ್ಧ, ಇಂಡಿಯಾ ಮೈತ್ರಿಕೂಟದ ಪರವಾಗಿ ಮತ ಚಲಾಯಿಸಿದರು.

ಬಹಳ ದಿನಗಳ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಂಸತ್ತಿಗೆ ಹಾಜರಾಗಿದ್ದು ಎಲ್ಲರಲ್ಲೂ ಅಚ್ಚರಿ ಮತ್ತು ಸಂತೋಷ ತಂದಿತ್ತು. ಅಲ್ಲದೇ, ಸಿಂಗ್ ರಾಜ್ಯಸಭೆಯಲ್ಲಿ ಚರ್ಚೆ ಆಲಿಸುತ್ತ ಕುಳಿತಿದ್ದ ವಿಡಿಯೋ ಹಾಗೂ ಫೋಟೋಗಳನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಸಿಂಗ್ ಉತ್ಸಾಹಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version