ಎಲ್ಲಿದೆ ಪ್ರಜಾಕೀಯ?: ಸುಸ್ತಾಗಿ ಬಿಟ್ರಾ ಉಪೇಂದ್ರ?
ಸಿನಿಮಾ ಸ್ಟೈಲ್ ನಲ್ಲಿ ರಾಜಕೀಯ ಮಾಡಲು ಹೊರಟಿದ್ದ ಉಪೇಂದ್ರ ಅವರು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಪ್ರಜಾಕೀಯ ಅನ್ನೋ ಪಕ್ಷವನ್ನು ಹುಟ್ಟು ಹಾಕಿದ ಉಪೇಂದ್ರ ಅವರು ಆಡಿದ ಮಾತುಗಳು ಅವರ ಅಭಿಮಾನಿಗಳಲ್ಲಿ ಏನೋ ಹೊಸತನ್ನು ಮಾಡುತ್ತಾರೆ ಅನ್ನೋ ಭ್ರಮೆ ಸೃಷ್ಟಿಸಿತ್ತು. ಆದರೆ, ಇದೀಗ ಉಪೇಂದ್ರ ಅವರಿಗೆ ವಾಸ್ತವ ಸ್ಥಿತಿ ಗೊತ್ತಾಯ್ತೆ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.
ಕಳೆದ ಹಲವು ವರ್ಷಗಳಿಂದ ಪ್ರಜಾಕೀಯ ಎಂದು ಓಡಾಡುತ್ತಿದ್ದ ಉಪೇಂದ್ರ ಅವರು ಇದೀಗ ಸಿನಿಮಾ ಡೈರೆಕ್ಷನ್, ಶೂಟಿಂಗ್ ಅಂತ ಬ್ಯುಸಿಯಾಗಿ ಬಿಟ್ಟಿದ್ದಾರೆ. ವಿವಿಧ ಪಕ್ಷಗಳು ರಾಜಕೀಯ ಚಟುವಟಿಕೆಯಲ್ಲಿ ತೊಡಗಿವೆ, ಜನರನ್ನು ತಲುಪಲು ಇನ್ನಿಲ್ಲದ ಪಾಡುಪಡುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಜಾಕೀಯದ ನೆರಳು ಕೂಡ ಕಾಣುತ್ತಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ.
ಇತಿಹಾಸದಲ್ಲಿ ನಡೆದಿರುವುದು ನನಗೆ ಬೇಡ, ಪ್ರಸೆಂಟ್ ನನಗೆ ಬೇಕು ಅನ್ನುತ್ತಿದ್ದ ಉಪೇಂದ್ರ ಅವರು, ಅಂಬೇಡ್ಕರ್ ಅವರು ಹೇಳಿದ, ‘ಇತಿಹಾಸ ತಿಳಿಯದವನು, ಇತಿಹಾಸ ಸೃಷ್ಟಿಸಲಾರ’ ಮಾತನ್ನು ನಿರಾಕರಿಸಿ, ಅವಮಾನಕರ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಇದೀಗ ಅವರಿಗೆ ಸತ್ಯದ ಅರಿವಾಗಿರಲೂ ಬಹುದು. ಇತಿಹಾಸವನ್ನು ತಿಳಿಯದವನು, ಇತಿಹಾಸವನ್ನು ನಿರ್ಲಕ್ಷ್ಯಿಸಿದವರು ಕೂಡ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ.
ರಾಜಕೀಯ ಅನ್ನೋದು ಸಿನಿಮಾದ ಕಥೆಯ ರೀತಿ ಅಲ್ಲ, ಸಿನಿಮಾದಲ್ಲಿ ಹಿಟ್ ಆಗಲು ಒಂದು ಕಾಲ್ಪನಿಕ ಕಥೆ ಇದ್ರೆ ಸಾಕು, ಆದ್ರೆ, ರಾಜಕೀಯದಲ್ಲಿ ಸತ್ಯ ಮತ್ತು ವಾಸ್ತವ ಪ್ರಜ್ಞೆ ಇರಲೇ ಬೇಕು. ಇದಿಲ್ಲದೇ ಯಾವುದೇ ಪಕ್ಷ ಮುನ್ನಡೆಯಲು ಸಾಧ್ಯವಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw