ಕರ್ನಾಟಕದಲ್ಲಿ ಸಾವರ್ಕರ್, ಹೆಡ್ಗೆವಾರ್ ಕುರಿತ ಪಠ್ಯಕ್ಕೆ ಕೊಕ್: ಉದ್ಧವ್ ಠಾಕ್ರೆಗೆ ಪ್ರಶ್ನೆಗಳ ಬಾಣ ಬಿಟ್ಟ ಫಡ್ನವೀಸ್..!
ಕರ್ನಾಟಕ ರಾಜ್ಯದಲ್ಲಿನ ಶಾಲಾ ಪಠ್ಯಕ್ರಮದಿಂದ ಸಾವರ್ಕರ್ ಮತ್ತು ಹೆಡ್ಗೆವಾರ್ ಕುರಿತ ಪಠ್ಯ ತೆಗೆದುಹಾಕಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾಜಿ ಮಿತ್ರಪಕ್ಷ ಶಿವಸೇನಾ ನಾಯಕ ಉದ್ಧವ್ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಶಿವಸೇನಾ ನಾಯಕ ಠಾಕ್ರೆ ಅವರು ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದರು. ಸಾವರ್ಕರ್ ನಮಗೆ ರೋಲ್ ಮಾಡೆಲ್. ಅವರಿಗೆ ಮಾಡುವ ಅಪಮಾನವು ದೇವರಿಗೆ ಮಾಡುವ ಅವಮಾನಕ್ಕೆ ಸಮಾನ ಎಂದು ಹೇಳಿದ್ದರು. ಸಾವರ್ಕರನ್ನು ಅವಮಾನಿಸುವುದನ್ನು ಸಹಿಸಿಕೊಳ್ಳುವುದಿಲ್ಲ. ಸಾವರ್ಕರ್ ಅವರನ್ನು ಕೀಳಾಗಿಸಿದರೆ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಮೂಡುತ್ತದೆ ಎಂದು ಠಾಕ್ರೆ ಎಚ್ಚರಿಸಿದ್ದರು. ಇದನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವ ಫಡ್ನವೀಸ್, ಉದ್ಧವ್ ಠಾಕ್ರೆ ಅವರು ಅಧಿಕಾರದಲ್ಲಿರುವುದಕ್ಕಾಗಿ ತಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ನೀವು ಪುಸ್ತಕದಿಂದ ಹೆಸರನ್ನು ಅಳಿಸಬಹುದು. ಆದರೆ ಅದನ್ನು ಹೃದಯದಿಂದ ಅಳಿಸಲು ಸಾಧ್ಯವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ನೀವು ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಆದರೆ ನಾನು ಉದ್ಧವ್ ಠಾಕ್ರೆ ಅವರನ್ನು ಕೇಳುತ್ತೇನೆ. ಮಹಾವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್‌ಗೆ ಹೆಗಲಿಗೆ ಹೆಗಲು ಕೊಟ್ಟು ಕೂತಿರುವವರೇ, ಈಗ ನಿಮ್ಮ ಪ್ರತಿಕ್ರಿಯೆ ಏನು..? ಅಧಿಕಾರಕ್ಕಾಗಿ ಮಾತ್ರ ಅಲ್ಪಸಂಖ್ಯಾತ ಸಮುದಾಯಗಳ ಓಲೈಕೆ ನಡೆಯುವುದನ್ನು ನೀವು ಒಪ್ಪಿಕೊಳ್ಳುತ್ತೀರಾ, ವೀರ ಸಾವರ್ಕರ್ ಅವರ ಈ ಅವಮಾನವನ್ನು ಒಪ್ಪಿಕೊಳ್ಳುತ್ತೀರಾ?ಅಥವಾ ಕುರ್ಚಿಗಾಗಿ ಸುಮ್ಮನಾಗುತ್ತೀರಾ? ಈ ಪ್ರಶ್ನೆ ಉದ್ಧವ್ ಠಾಕ್ರೆ ಅವರಿಗೆ. ಈಗ ನಿಮ್ಮ ಪ್ರತಿಕ್ರಿಯೆ ಏನು ಎಂದು ನಿಖರವಾಗಿ ಹೇಳಿ ಎಂದು ಸವಾಲ್ ಹಾಕಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw