ಅತ್ಯಾಚಾರ ಸಂತ್ರಸ್ತೆ ಬಳಿ ವಿವಸ್ತ್ರವಾಗಿ ಗಾಯಗಳನ್ನು ತೋರಿಸಲು ಹೇಳಿದ ಮ್ಯಾಜಿಸ್ಟ್ರೇಟ್ ವಿರುದ್ಧ ದೂರು ದಾಖಲು - Mahanayaka

ಅತ್ಯಾಚಾರ ಸಂತ್ರಸ್ತೆ ಬಳಿ ವಿವಸ್ತ್ರವಾಗಿ ಗಾಯಗಳನ್ನು ತೋರಿಸಲು ಹೇಳಿದ ಮ್ಯಾಜಿಸ್ಟ್ರೇಟ್ ವಿರುದ್ಧ ದೂರು ದಾಖಲು

crime
03/04/2024

ಜೈಪುರ: ಅತ್ಯಾಚಾರ ಸಂತ್ರಸ್ತೆಯ ಬಳಿ ವಿವಸ್ತ್ರವಾಗಿ ಗಾಯಗಳನ್ನು ತೋರಿಸುವಂತೆ ಹೇಳಿದ ಆರೋಪದ ಮೇಲೆ ರಾಜಸ್ಥಾನದ ಕರೌಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ಉಪ ಎಸ್ಪಿ (ಎ ಟಿ-ಎಸ್ ಸಿ) ಸೆಲ್ ಮಿನಾ ಮೀನಾ ಮಾತನಾಡಿ, ಮಾರ್ಚ್ 30ರಂದು ಹಿಂಡೌನ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಅತ್ಯಾಚಾರ ಸಂತ್ರಸ್ತೆಗೆ ವಸ್ತ್ರ ಕಳಚಿ ಗಾಯಗಳನ್ನು ತೋರಿಸಲು ಹೇಳಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆ ವಿವಸ್ತ್ರವಾಗಲು ನಿರಾಕರಿಸಿದ್ದು, ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರ ಅವರು ಮ್ಯಾಜಿಸ್ಟ್ರೇಟ್ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು ಎಂದು ಮೀನಾ ತಿಳಿಸಿದ್ದಾರೆ.


Provided by

ಮ್ಯಾಜಿಸ್ಟ್ರೇಟ್ ವಿರುದ್ಧ ಐಪಿಸಿ ಮತ್ತು ಎಸ್ ಸಿ/ಎಸ್ ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 345 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ