ಭಾರತೀಯರೇನು ಹಂದಿಗಳೇ ? ಎಂದು ಪ್ರಶ್ನಿಸಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ದೆಹಲಿ: ಆಸ್ಟ್ರಾಜೆನಿಕಾ ಲಸಿಕೆಯನ್ನು ಕೊರೊನಾ ವಿರುದ್ಧ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, WHO ಅನುಮತಿ ನೀಡದೇ ಇರುವ ಲಸಿಕೆಯನ್ನು ಬಳಸಲು ಅಥವಾ ಪ್ರಯೋಗಿಸಲು ಭಾರತೀಯರೇನು ಹಂದಿಗಳೇ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ. ಕೇಂದ್ರ ಸರ್ಕಾರವು WHO ಅನುಮತಿ ನೀಡದ ಲಸಿಕೆಯನ್ನು ಭಾರತೀಯರ ಮೇಲೆ ಪ್ರಯೋಗಿಸಲು ಮುಂದಾಗಿದೆ. ಈ ರೀತಿಯಾಗಿ ಭಾರತೀಯರ ಮೇಲೆ ಲಸಿಕೆ ಪ್ರಯೋಗಿಸಲು ಅವರೇನು ಹಂದಿಗಳೇ ಎಂದು ಮಾರ್ಮಿಕವಾಗಿ ಕೇಂದ್ರ ಸರ್ಕಾರವನ್ನು ಅವರು ಪ್ರಶ್ನಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು, ಆಡಳಿತ ಪಕ್ಷದಲ್ಲಿದ್ದರೂ ಕೆಲವು ವಿಚಾರದಲ್ಲಿ ಬಿಜೆಪಿಯ ವಿಚಾರಗಳಲ್ಲಿ ಅವರು ರಾಜಿ ಮಾಡಿಕೊಳ್ಳುವುದಿಲ್ಲ. ಈ ಹಿಂದೆಯೂ ಸ್ವಪಕ್ಷೀಯರ ವಿರುದ್ಧವೇ ಅವರು ಹೇಳಿಕೆ ನೀಡಿದ್ದರು. ಇದೀಗ ಕೊವಿಡ್ ಲಸಿಕೆಯ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ.
WHO hasn't cleared AstraZeneca even for emergency use!! Are Indians going to be Guinea pigs?
— Subramanian Swamy (@Swamy39) January 2, 2021