ರೊಚ್ಚಿಗೆದ್ದ ಈಶ್ವರಪ್ಪ!: ಮೋದಿ ಫೋಟೋ ಬಳಸಬೇಡ ಎನ್ನಲು ಇವರ್ಯಾರು?

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಫೋಟೋ ಬಳಸಬೇಡ ಎಂದು ಹೇಳಲು ಇವರು ಯಾರು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮೋದಿ ಫೋಟೋ ಬಳಸಬೇಡಿ ಅಂತಿದ್ದಾರೆ. ಅವರು ಮೋದಿ ಫೋಟೋ ಬಿಟ್ಟು ಚುನಾವಣೆ ನಡೆಸಲಿ. ಯಡಿಯೂರಪ್ಪ, ವಿಜಯೇಂದ್ರ ಫೋಟೋ ಹಾಕಿಕೊಂಡು ಚುನಾವಣೆ ನಡೆಸಲಿ ನೋಡೋಣ. ನನಗೆ ನರೇಂದ್ರ ಮೋದಿ ಫೋಟೋ ಹಾಕಬೇಡಿ ಅನ್ನಲು ಅವರು ಯಾರು?. ಕೋರ್ಟ್, ಚುನಾವಣಾ ಆಯೋಗ ಏನು ತೀರ್ಮಾನ ಕೊಡುತ್ತದೋ ನೋಡೋಣ ಎಂದು ಈಶ್ವರಪ್ಪ ಹೇಳಿದರು.
ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ನನ್ನನ್ನು ಉಚ್ಛಾಟನೆ ಮಾಡದಿರಲು ಏನು ಕಾರಣ ಗೊತ್ತಿಲ್ಲ. ನಾನು ಉಚ್ಛಾಟನೆ ಮಾಡಲಿ ಅಂತಾ ಕಾಯ್ತಿದ್ದೇನೆ ಎಂದು ಹೇಳಿದರು.
ಇದೇ ವೇಳೆ, ಈಶ್ವರಪ್ಪ ಮುಸ್ಲಿಮರಿಗೆ ಸುಖಾ ಸುಮ್ಮನೆ ತೊಂದರೆ ಮಾಡಲ್ಲ. ರಾಷ್ಟ್ರಭಕ್ತ ಮುಸ್ಲಿಮರು ನನಗೆ ಮತ ಹಾಕ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth