ಮೀಮ್-ಸ್ಟಾರ್ ಕ್ಸೇವಿಯರ್ ಯಾರು? - Mahanayaka
11:31 PM Wednesday 5 - February 2025

ಮೀಮ್–ಸ್ಟಾರ್ ಕ್ಸೇವಿಯರ್ ಯಾರು?

xavier
02/11/2023

ಅವರ ಒಂದೊಂದು ಮೀಮ್ ಕೂಡ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಬಲ್ಲದು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುವ ವಿವಿಧ ವಿಷಯಗಳಿಗೆ ಹಾಸ್ಯ ಭರಿತ ಕಾಮೆಂಟ್ ಗಳನ್ನು ಹಾಕಿ ಜನರನ್ನು ನಗಿಸುತ್ತಿರುವ ಮೀಮ್ ಸ್ಟಾರ್ ಕ್ಸೇವಿಯರ್ (Meme-Star Xavier) ಈಗ ಅತ್ಯಂತ ಜನಪ್ರಿಯರಾಗಿದ್ದಾರೆ. ಆದ್ರೆ ಈ ಕ್ಸೇವಿಯರ್ ಯಾರು ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಸಾಕಷ್ಟು ಜನರು ಕ್ಸೇವಿಯರ್ ವೊಬ್ಬರು ವಿದೇಶದಲ್ಲಿ ನೆಲೆಸಿರುವ ಭಾರತೀಯ ವ್ಯಕ್ತಿ ಅಂತ ಹೇಳುತ್ತಿದ್ದಾರೆ.  ಹೀಗೆ ಕ್ಸೇವಿಯರ್ ಬಗ್ಗೆ ನೂರಾರು ರೀತಿಯ ವಿವರಣೆಗಳನ್ನು ಕೆಲವರು ನೀಡುತ್ತಾರೆ. ಹಲವಾರು ಆನ್ ಲೈನ್ ಮಾಧ್ಯಮಗಳು ಕ್ಸೇವಿಯರ್ ಯಾರು ಅಂತ ತಿಳಿದುಕೊಳ್ಳಲು ಅವರ ಹಿಂದೆ ಬಿದ್ದಿದ್ದಾರೆ.

ನೋ ಯುವರ್ ಮೀಮ್ಸ್ ಎಂಬ ವೆಬ್‌ ಸೈಟ್ ಪ್ರಕಾರ, ಕ್ಸೇವಿಯರ್ ನ ನಿಜವಾದ ಹೆಸರು ಪಕಲು ಪಾಪಿಟೊ(Pakalu Papito) ಅಂತ. ಇವರು  2013ರಲ್ಲಿ ತಮ್ಮ ಮೊದಲ ಟ್ವೀಟ್ ಆರಂಭಿಸಿದರು. ಅವರ ಮೊದಲ ಟ್ವೀಟ್ “ಹೆಲೋ ಟ್ವಿಟ್ಟರ್, ನಾನು ಒಬ್ಬಂಟಿಯಾಗಿದ್ದೇನೆ” ಎಂಬುದಾಗಿತ್ತು. ಆ ಖಾತೆಯಲ್ಲಿ ಸಾಕಷ್ಟು ಹಾಸ್ಯ ಭರಿತ ಮೀಮ್ ಗಳನ್ನು ಪೋಸ್ಟ್ ಮಾಡಲಾಗಿತ್ತು. ಅವರ ಪೋಸ್ಟ್ ಗಳು ಸಾಕಷ್ಟು ವೈರಲ್ ಆಗಿತ್ತು ಮತ್ತು 2015ರಲ್ಲಿ ಪ್ರಚಂದ ಖ್ಯಾತಿಯನ್ನು ಕಳಿಸಿದ್ದರು. ಸೆಪ್ಟಂಬರ್ 2013ರಲ್ಲಿ ಅವರು ಫೇಸ್ ಬುಕ್ ನಲ್ಲಿ ಪುಟ ತೆರೆದರು. ಕೇವಲ ಎರಡೇ ವರ್ಷದಲ್ಲಿ ಫೇಸ್ ಬುಕ್ ಪುಟ ಕೂಡ ಜನಪ್ರಿಯವಾಗಿತ್ತು. ಆದ್ರೆ ಈ ಜನಪ್ರಿಯತೆ ಹೆಚ್ಚು ಕಾಲ ಮುಂದುವರಿಯಲಿಲ್ಲ. ಯಾವುದೋ ಕಾರಣಕ್ಕೆ ಇವರ ಟ್ವಿಟ್ಟರ್ ಖಾತೆ ಅಮಾನತುಗೊಂಡಿತು ಮತ್ತು ಅವರ ಫೇಸ್ ಬುಕ್ ಪುಟವನ್ನೂ ಅಳಿಸಲಾಯಿತು. ಈವರೆಗೆ ಅದಕ್ಕೆ ಕಾರಣಗಳು ತಿಳಿದಿಲ್ಲ.

ಇದೀಗ Xavier ಎಂಬ ಖಾತೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. Meme-Star Xavier ಎಂದೇ ಜನ ಗುರುತಿಸುತ್ತಿದ್ದಾರೆ. ಸಾಕಷ್ಟು ಜನರಿಗೆ ಕ್ಸೇವಿಯರ್ ಪೋಸ್ಟ್ ಗಳು ಇಷ್ಟವಾದ್ರೆ, ಸಾಕಷ್ಟು ಜನರು ಇವರ ಪೋಸ್ಟ್ ಗಳನ್ನು ವಿರೋಧಿಸುವವರು ಕೂಡ ಇದ್ದಾರೆ.  ಹೀಗಾಗಿ ಒಳ್ಳೆಯ ಮತ್ತು ಕೆಟ್ಟ ಎರಡು ಅಭಿಪ್ರಾಯಗಳ ನಡುವೆಯೇ ಕ್ಸೇವಿಯರ್ ತಮ್ಮ ಪೋಸ್ಟ್ ಗಳನ್ನು ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ