ಚನ್ನಪಟ್ಟಣದಲ್ಲಿ ಯಾರು ಎನ್ ಡಿಎ ಅಭ್ಯರ್ಥಿಯಾಗಲಿದ್ದಾರೆ?: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಯಾರು ಅಭ್ಯರ್ಥಿ ಆಗಲಿದ್ದಾರೆ ಎಂಬುದಲ್ಲ ಅಂತಿಮವಾಗಿ ಎನ್ ಡಿ ಎ ಅಭ್ಯರ್ಥಿ ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಗೊಂದಲ ಸಂಬಂಧ ತುಮಕೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ನಿಖಿಲ್ ಉತ್ತರಿಸಿದರು.
ಚನ್ನಪಟ್ಟಣದಲ್ಲಿ ಅಷ್ಟೇ ಅಲ್ಲ ಉಪಚುನಾವಣೆ ಜೊತೆಗೆ ಸಂಡೂರು, ಶಿಗ್ಗಾವಿ ಸೇರಿ ಮೂರು ಕಡೆ ಉಪಚುನಾವಣೆ ನಡೆಯಬೇಕಿದೆ. ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದರು.
ಬಿಜೆಪಿ ರಾಜ್ಯನಾಯಕರು, ನಮ್ಮ ಜೆಡಿಎಸ್ ರಾಜ್ಯ ನಾಯಕರು ಸೇರಿ ಚರ್ಚೆ ಮಾಡುತ್ತಿದ್ದಾರೆ. ಸಿ.ಪಿ ಯೋಗೇಶ್ವರ್ ಗೆ ಟಿಕೆಟ್ ವಿಚಾರದಲ್ಲಿ ಸೂಕ್ತವಾದ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಚರ್ಚೆಗಳು ಆಗಬೇಕಾಗುತ್ತೆ. ಆಗ ಫಲಿತಾಂಶ ನಮ್ಮ ಪರ ಬರಲು ಸಾಧ್ಯ. ಅಂತಿಮವಾಗಿ ಎನ್ ಡಿಎ ಅಭ್ಯರ್ಥಿಯಾಗಿರುತ್ತೆ. ಜೆಡಿಎಸ್- ಬಿಜೆಪಿ ಚರ್ಚೆಯಿಲ್ಲ, ಒಟ್ಟಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ಹಾಗಾಗಿ ಎನ್ ಡಿಎ ಅಭ್ಯರ್ಥಿ ಕಣದಲ್ಲಿ ಇರಲಿದ್ದಾರೆ ಎಂದರು.
ನಟ ದರ್ಶನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಈ ಬಗ್ಗೆ ನಾನು ಹೆಚ್ಚಾಗಿ ಮಾತನಾಡಲ್ಲ. ಕಾನೂನುಗಿಂತ ಯಾರು ದೊಡ್ಡವರಲ್ಲ. ಕಾನೂನಿಗೆ ಎಲ್ಲಾರು ಕೂಡ ತಲೆಬಾಗಬೇಕು ಎಂದರು.
ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಏನಿಲ್ಲ. ದರ್ಶನ್ ಅಭಿಮಾನಿಗಳಿಗೆ ಏನು ಹೇಳಲ್ಲ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: