ಚಿಕಿತ್ಸೆಗೆ ಹೋಗಬೇಕಾದ್ರೂ ಜೋಳಿಗೆ, ಸತ್ತರೂ ಜೋಳಿಗೆ: ಈ ಗ್ರಾಮಸ್ಥರ ನೋವು ಕೇಳುವವರು ಯಾರು? - Mahanayaka
4:34 AM Saturday 14 - September 2024

ಚಿಕಿತ್ಸೆಗೆ ಹೋಗಬೇಕಾದ್ರೂ ಜೋಳಿಗೆ, ಸತ್ತರೂ ಜೋಳಿಗೆ: ಈ ಗ್ರಾಮಸ್ಥರ ನೋವು ಕೇಳುವವರು ಯಾರು?

samse
31/08/2024

ಚಿಕ್ಕಮಗಳೂರು:  ಕಾಫಿನಾಡ ಈ ಕುಗ್ರಾಮಕ್ಕೆ ಜೋಳಿಗೆಯೇ ಆಂಬುಲೆನ್ಸ್ ಆಗಿದೆ.  ಅನಾರೋಗ್ಯ ಪೀಡಿತರನ್ನು ಚಿಕಿತ್ಸೆಗೆಂದು ಜೋಳಿಗೆಯಲ್ಲಿಯೇ ಹೊತ್ತೊಯ್ಯಬೇಕಿದೆ. ಯಾರಾದರೂ ಮೃತಪಟ್ಟಾಗಲೂ ಮತದೇಹವನ್ನೂ ಜೋಳಿಗೆಯಲ್ಲೇ ತರುವಂತಹ ಪರಿಸ್ಥಿತಿ ಇಲ್ಲಿನದ್ದಾಗಿದೆ.

ಇದು ಕಳಸ ತಾಲೂಕಿನ ಸಂಸೆ ಸಮೀಪದ ಕೋಣೆಗೂಡು ಗ್ರಾಮದ ದುಸ್ಥಿತಿ. ಇಲ್ಲಿನ 19 ವರ್ಷ ವಯಸ್ಸಿನ ಯುವಕ ಅವಿನಾಶ್ ಅನಾರೋಗ್ಯದ  ಕಾರಣದಿಂದ ಮೃತಪಟ್ಟಿದ್ದಾರೆ. ಸರಿಯಾದ ರಸ್ತೆ ಸೌಕರ್ಯವಿಲ್ಲದ ಕಾರಣ  ಇವರ ಮೃತದೇಹವನ್ನು ಜೋಳಿಗೆಯಲ್ಲಿ ಹೊತ್ತೊಯ್ದ ದೃಶ್ಯ ಕಂಡು ಬಂತು.

ಈ ಸ್ಥಳಕ್ಕೆ ಆ್ಯಂಬುಲೈನ್ಸ್ ಬಂದರೂ ನಿಲ್ಲೋದು ಊರಿನಿಂದ 1.5 ಕಿ.ಮೀ. ದೂರದಲ್ಲಿ. ಆಂಬುಲೆನ್ಸ್ ಬಂದ್ರು ಹಳ್ಳ ದಾಟೋಕ್ಕೆ ಆಗೋಲ್ಲ, ಜೋಳಿಗೆಯಲ್ಲಿ ಹೊತ್ಕೊಂಡೆ ಕಾಲು ಸಂಕ ದಾಟಬೇಕು.


Provided by

ಕಳೆದ ಮೂರು ವರ್ಷದಲ್ಲಿ ಒಂದೇ ಗ್ರಾಮದ ಮೂರು ಜನ ಸಾವನ್ನಪ್ಪಿದ್ದಾರೆ. ರಸ್ತೆ ಸೌಕರ್ಯ ಸರಿಯಾಗಿದಿದ್ದರೆ, ಈ ಮೂವರ ಜೀವ ಉಳಿಯುತ್ತಿತ್ತೇನೋ. ಇಲ್ಲಿಗೆ ರಸ್ತೆ ಸೌಕರ್ಯ ಇಲ್ಲದ ಕಾರಣ ಚಿಕಿತ್ಸೆಗೆ ತಕ್ಷಣದಲ್ಲಿ ಹೋಗಲು ಪರದಾಡುವ ಪರಿಸ್ಥಿತಿ ಇದೆ. ಯಾರಿಗಾದರೂ ಗಂಭೀರ ಸ್ಥಿತಿ ಏರ್ಪಟ್ಟರೆ ಅವರ ಜೀವ ಉಳಿಯಲು ಸಾಧ್ಯವೇ ಇಲ್ಲ ಅನ್ನೋ ಪರಿಸ್ಥಿತಿ ಇಲ್ಲಿಯದ್ದಾಗಿದೆ.

ಇಲ್ಲಿನ ಜನರ ಜೀವ ಉಳಿಸಲಾದರೂ ಸೇತುವೆ ರಸ್ತೆ ಮಾಡಿಕೊಡಿ ಅಂತ ಇಲ್ಲಿನ ಸಾರ್ವಜನಿಕರು  ಮನವಿ ಮಾಡಿದ್ದಾರೆ. ಇಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿವೆ, ಈ ಕುಟುಂಬಗಳ ರಕ್ಷಣೆಗಾಗಿ ಸರಿಯಾದ ಸೇತುವೆ ರಸ್ತೆ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ