ನಿಮಗೆ ಮೋದಿ ಮೇಲೆ ಯಾಕೆ ಕೋಪ..? ಅಮಿತ್ ಶಾಗೆ ಸ್ಟಾಲಿನ್ ಪ್ರಶ್ನೆ
ತಮಿಳುನಾಡಿನ ವ್ಯಕ್ತಿಯೊಬ್ಬರನ್ನು ಪ್ರಧಾನಿಯಾಗುವಂತೆ ಮಾಡಿ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾರ ಹೇಳಿಕೆಗೆ ತಮಿಳುನಾಡು ಎಂಕೆ ಸ್ಟಾಲಿನ್ ತಿರುಗೇಟು ನೀಡಿದ್ದಾರೆ. ನೀವ್ಯಾಕೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇಷ್ಟೊಂದು ಕೋಪಗೊಂಡಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.
ಮುಂದಿನ ಭವಿಷ್ಯದಲ್ಲಿ ತಮಿಳುನಾಡಿನವರು ಪ್ರಧಾನಿ ಸ್ಥಾನಕ್ಕೇರಲು ನೀವು ಶ್ರಮಿಸಬೇಕು ಎಂದು ಅಮಿತ್ ಶಾ ಭಾನುವಾರ ತಮಿಳುನಾಡಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, ತಮಿಳಿಗನೊಬ್ಬ ಪ್ರಧಾನಿಯಾಗಬೇಕು ಎಂಬ ಆಲೋಚನೆ ಬಿಜೆಪಿಗೆ ಇದ್ರೆ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಮತ್ತು ಕೇಂದ್ರ ಸಚಿವ ಎಲ್ ಮುರುಗನ್ ಇದ್ದಾರೆ. ಅವರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿಗಳಾಗುವ ಅವಕಾಶ ಸಿಗಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಈ ಹಿಂದೆ ಇಬ್ಬರು ಹಿರಿಯ ರಾಜ್ಯ ನಾಯಕರು ಪ್ರಧಾನಿಯಾಗುವುದನ್ನು ಡಿಎಂಕೆ ತಡೆದಿತ್ತು ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ಸಭೆಯಲ್ಲಿ ಅಮಿತ್ ಶಾ ಅವರು ಕೆ ಕಾಮರಾಜ್ ಮತ್ತು ಜಿಕೆ ಮೂಪನಾರ್ ಅವರನ್ನು ಡಿಎಂಕೆ ಪ್ರಧಾನಿಯಾಗದಂತೆ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹೇಳಿಕೆಯನ್ನು ತಳ್ಳಿಹಾಕಿದ ಎಂಕೆ ಸ್ಟಾಲಿನ್, ಡಿಎಂಕೆ ವಿವರವಾದ ವಿವರಣೆಯನ್ನು ನೀಡಬೇಕಾದರೆ ಶಾ ಅವರ ಹೇಳಿಕೆಯನ್ನು ಬಹಿರಂಗಗೊಳಿಸಿ ಎಂದು ಬಿಜೆಪಿಗೆ ಸವಾಲ್ ಹಾಕಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw