ಪ್ರಧಾನಿ ಮೋದಿ ಅವರೇ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದ್ಯಾಕೆ?: ಡಿಕೆಶಿ ಪ್ರಶ್ನೆ
ಬೆಂಗಳೂರು:ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದ್ಯಾಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ
ಯಡಿಯೂರಪ್ಪ ಅವರು ಸದನದಲ್ಲಿ ಕಣ್ಣಿರು ಹಾಕಿದ್ದು ಅವರ ನಾಯಕತ್ವದಲ್ಲಿ ನೆಡದ ಚುನಾವಣಿಯಲ್ಲಿ104 ಸೀಟ್ ಪಡೆದುಕೊಂಡು ಸಿಎಂ ಆದ್ರು, ಯಾಕೆ ಅವರನ್ನು ಸಿಎಂ ಸಾನ್ಥದಿಂದ ಇಳಿಸಿದ್ರು ಅದಕ್ಕೆ ಕಾರಣ ಏನು ಅಂತ ರಾಜ್ಯದ ಜನತೆಗೆ ತಿಳಿಸುಬೇಕು ಅದು ಬಿಟ್ಟು ಬರಿ ಲಿಪ್ ಸಿಂಪತಿ ನಮ್ಗೆ ಬೇಡ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಯವರು ಕಲಾವಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಆದ್ರೆ, ಯಡಿಯೂರಪ್ಪರನ್ನು ಅವರು ಈಗ ಹೊಗಳುತ್ತಿದ್ದಾರೆ. ಅಂದು ಯಡಿಯೂರಪ್ಪ ಅವರು ರಾಜೀನಾಮೆ ನೀಡುವಾಗ ಕಣ್ಣೀರು ಹಾಕುತ್ತಾ ರಾಜಭವನ ಕ್ಕೆ ಹೋದರು. ಯಡಿಯೂರಪ್ಪ ಅವರಿಗೆ ಆಗ ಕೊಟ್ಟ ನೋವು, ಅವರಿಟ್ಟ ಕಣ್ಣೀರಿಗೆ ಈಗ ಮೋದಿ ಉತ್ತರ ಕೊಡಬೇಕಿದೆ ಎಂದರು.
ಯಡಿಯೂರಪ್ಪ ಅವರ ಕುಟುಂಬ ಹಾಗೂ ಸ್ನೇಹಿತರ ಮನೆಗಳ ಮೇಲೆ ಐಟಿ ರೇಡ್ ಮಾಡಿಸಲಾಯಿತು. ಇದೆಲ್ಲಾ ಯಾಕಾಯ್ತು ಎಂಬುದರ ಬಗ್ಗೆ ಮೊದಲು ಜನತೆಗೆ ಉತ್ತರ ಕೊಡಲಿ ಎಂದು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw