ಮೀನುಗಳನ್ನು ಸ್ವಚ್ಛಗೊಳಿಸುವ ಮುನ್ನ ಉಪ್ಪು, ಅರಿಶಿಣದಲ್ಲಿ ನನೆಸಿಡುವುದೇಕೆ?

fish
24/04/2024

ಮೀನು ಅಥವಾ ಚಿಕನ್ ನಂತಹ ಯಾವುದೇ ಮಾಂಸದ ಅಡುಗೆ ಮಾಡುವ ಮೊದಲು ಮಾಂಸವನ್ನು ಉಪ್ಪು ಹಾಗೂ ಅರಿಶಿಣದಲ್ಲಿ ನೆನೆಸಿ ಇಡುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಈ ರೀತಿಯಾಗಿ ಮಾಡುವುದರ ಹಿಂದಿನ ಉದ್ದೇಶವೇನು ಎನ್ನುವುದು ಬಹುತೇಕರಿಕೆ ಗೊತ್ತಿರುವುದಿಲ್ಲ. ಅದಕ್ಕೆ ಉತ್ತರ ಇಲ್ಲಿದೆ…

ಹಸಿ ಮೀನುಗಳನ್ನು ಅಥವಾ ಮಾಂಸಗಳನ್ನು ಅಡುಗೆಗೂ ಮೊದಲು ಅರಿಶಿಣ ಹಾಗೂ ಉಪ್ಪು ಹಾಕಿ ತೊಳೆಯುವುದರಿಂದ ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೂಕ್ಷ್ಮ ಜೀವಿಗಳು ಹಾಗೂ ಸೋಂಕುಗಳನ್ನು ಕೊಲ್ಲುತ್ತದೆ. ಅಲ್ಲದೇ ಮೀನನ್ನುಅರಿಶಿಣ ನೀರಿನಲ್ಲಿ ನನೆಸಿ ಇಡುವುದರಿಂದ ಮೀನು ತಾಜಾವಾಗಿರುತ್ತದೆ.

ಉಪ್ಪು ಹಾಗೂ ಅರಿಸಿನನೊಂದಿಗೆ ಮೀನನ್ನು ಮ್ಯಾರಿನೇಟ್ ಮಾಡುವುದರಿಂದ ಪ್ರೊಟೀನ್ ಅಂಶ ಹೊರಹೋಗದಂತೆ ನೋಡಿಕೊಳ್ಳುತ್ತದೆ. ಇದು ಮೀನನ್ನು ತಾಜಾವಾಗಿರಿ, ಸಾರಿನ ರುಚಿ ಹೆಚ್ಚುವಂತೆ ಮಾಡುತ್ತದೆ.

ಹಸಿ ಮೀನನ್ನು ಉಪ್ಪು ಹಾಗೂ ಅರಿಸಿನದ ಜೊತೆಗೆ ನನೆಸುವುದು ಅಥವಾ ತೊಳೆಯುವುದು ಮಾಡುವುದರಿಂದ ಇದರ ವಾಸನೆ ದೂರಾಗುತ್ತದೆ. ಕೆಲವೊಮ್ಮೆ ಮೀನು ಕೊಂಚ ಹಾಳಾಗಿದ್ದರೆ ಈ ರೀತಿ ತೊಳೆಯುವುದರಿಂದ ವಾಸನೆ ತಿಳಿಯುವುದಿಲ್ಲ.

ಮೀನನ್ನು ಅರಿಶಿಣ ಹಾಗೂ ಉಪ್ಪು ಸೇರಿಸಿ ತೊಳೆಯುವುದರಿಂದ ಮೀನು ಸಾರು ಅಥವಾ ಫ್ರೈ ಮಾಡುವಾಗ ರುಚಿ ಹೆಚ್ಚುತ್ತದೆ. ಮೊದಲೇ ಉಪ್ಪು, ಅರಿಸಿನ ಚೆನ್ನಾಗಿ ಹಿಡಿಯುವ ಕಾರಣ ಭಿನ್ನ ರುಚಿ ಸಿಗುತ್ತದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version