ಎರಡೂವರೆ ವರ್ಷ ಯಾಕೆ? 5 ವರ್ಷ ಸಿಎಂ ಆಗಿ: ಡಿ.ಕೆ.ಶಿವಕುಮಾರ್ ಗೆ ಕೆ.ಎನ್.ರಾಜಣ್ಣ ಟಾಂಗ್ - Mahanayaka

ಎರಡೂವರೆ ವರ್ಷ ಯಾಕೆ? 5 ವರ್ಷ ಸಿಎಂ ಆಗಿ: ಡಿ.ಕೆ.ಶಿವಕುಮಾರ್ ಗೆ ಕೆ.ಎನ್.ರಾಜಣ್ಣ ಟಾಂಗ್

kn rajanna
10/01/2025

ಬೆಂಗಳೂರು: ಮುಂದಿನ ಎರಡೂವರೆ ವರ್ಷ ಸಿಎಂ ಆಗಲು ಸಜ್ಜಾಗುತ್ತಿರುವ ಡಿ.ಕೆ.ಶಿವಕುಮಾರ್ ಗೆ ಸಚಿವ ಕೆ.ಎನ್.ರಾಜಣ್ಣ ಟಾಂಗ್ ನೀಡಿದ್ದು, ಎರಡೂವರೆ ವರ್ಷಕ್ಕೆ ಯಾಕೆ ಪ್ರಯತ್ನಿಸುತ್ತೀರಿ? ಮುಂದಿನ ಐದು ವರ್ಷಕ್ಕೆ ಮುಖ್ಯಮಂತ್ರಿ ಆಗಿ ಎಂದಿದ್ದಾರೆ.


Provided by

ಹಣೆಯಲ್ಲಿ ಬರೆದಿದ್ರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎನ್ನುವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಆಗ್ತಾರೆ ಅಂತನೂ ಹೇಳಿಲ್ಲ, ಆಗಲ್ಲ ಎಂದೂ ಹೇಳಿಲ್ಲ, ಹಣೆಯಲ್ಲಿ ಬರೆದಿದ್ದರೆ ಆಗ್ತಾರೆ ಎಂದಿದ್ದಾರೆ. ಎಲ್ಲರದ್ದು ವಿಧಿ ಏನೆಂದು ಮೊದಲೇ ತೀರ್ಮಾಣ ಆಗಿರುತ್ತದೆ ಅದರ ಪ್ರಕಾರ ಆಗುತ್ತದೆ ಎಂದರು.

ಡಿಕೆಶಿ ಟೆಂಪಲ್ ರನ್ನಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಅವರು,   ನನಗೆ ಪೂಜೆ, ಪುನಸ್ಕಾರ, ನಮನ, ವಾಮಾಚಾರದ ಬಗ್ಗೆ ನಂಬಿಕೆ ಇಲ್ಲ, ಅಸಹಾಯಕರಿಗೆ ಅದು ಒಳ್ಳೆಯದು ಮಾಡಿದರೆ ಅದೇ ಒಳ್ಳೆಯದು ಎಂದರು.


Provided by

ಯಾರೋ ಒಬ್ಬ ಅಸಹಾಯಕನಿಗೆ ತೊಂದರೆ ನೀಡಿದರೆ ಶಾಪ ಹಾಕುತ್ತಾನೆ. ಅದೇ ನಮಗೆ ಕೆಟ್ಟದಾಗುತ್ತದೆ. ಹಿಂದೆ ನನ್ನ ವಿರುದ್ಧವೂ ವಾಮಾಚಾರದ ಪ್ರಯೋಗ ನಡೆದಿತ್ತು. ಆ ಅನುಭವವಿದೆ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ