ಮಜಾ ಟಾಕೀಸ್ ನಿಂದ ಇಂದ್ರಜಿತ್ ಲಂಕೇಶ್ ಔಟ್ ಆಗಿದ್ದೇಕೆ?

ಸೃಜನ್ ಲೋಕೇಶ್ ಅವರು ನಡೆಸಿಕೊಡುವ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಮಜಾ ಟಾಕೀಸ್’ ನಲ್ಲಿ ಇಂದ್ರಜಿತ್ ಲಂಕೇಶ್ ಕಾಣುತ್ತಿಲ್ಲ. ಇಂದ್ರಜಿತ್ ಲಂಕೇಶ್ ಅವರು ಮಜಾ ಟಾಕೀಸ್ ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಅವರ ಸ್ಥಾನಕ್ಕೆ ಈಗ ಯೋಗರಾಜ್ ಭಟ್ ಅವರನ್ನು ತರಲಾಗಿದೆಯಾದರೂ ಇಂದ್ರಜಿತ್ ಲಂಕೇಶ್ ಇದ್ದಾಗ ಸಿಗುತ್ತಿದ್ದ ಮಜಾ ಈಗ ಸಿಗುತ್ತಿಲ್ಲ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ. ಇಂದ್ರಜಿತ್ ಲಂಕೇಶ್ ಅವರು ಯಾಕೆ ಮಜಾ ಟಾಕೀಸ್ ನಲ್ಲಿ ಇಲ್ಲ ಎನ್ನುವ ವೀಕ್ಷಕರ ಪ್ರಶ್ನೆಗೆ ಇದೀಗ ಖುದ್ದು ಇಂದ್ರಜಿತ್ ಲಂಕೇಶ್ ಅವರೇ ಉತ್ತರ ನೀಡಿದ್ದಾರೆ.
ಮಜಾ ಟಾಕೀಸ್ ಕಾರ್ಯಕ್ರಮ ಇದ್ದ ಸಂದರ್ಭದಲ್ಲೇ ಇಂದ್ರಜಿತ್ ಲಂಕೇಶ್ ಅವರು 2 ಸಿನಿಮಾ ಮಾಡಿದ್ದರು. ಆದರೆ ಅವರಿಗೆ ಸಿನಿಮಾಕ್ಕೆ ಮತ್ತು ಮಜಾ ಟಾಕೀಸ್ ಗೆ ಸಮಯ ನೀಡಲು ಸಾಧ್ಯವಾಗಿರಲಿಲ್ಲವಂತೆ, ಮಜಾ ಟಾಕೀಸ್ ಗೆ ಬರಲು ಕಷ್ಟವಾಗುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಈಗ ಶುರುವಾಗಿರುವ ಮಜಾ ಟಾಕೀಸ್ ಗೂ ಇಂದ್ರಜಿತ್ ಲಂಕೇಶ್ ಅವರನ್ನು ಕರೆದಿದ್ದರಂತೆ, ಆದರೆ ಇಂದ್ರಜಿತ್ ಅವರ ಮಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ, ಇಂದ್ರಜಿತ್ ಲಂಕೇಶ್ ಕೂಡ ಒಂದು ಸಿನಿಮಾ ಮಾಡುತ್ತಿದ್ದಾರಂತೆ ಹಾಗಾಗಿ ಮಜಾ ಟಾಕೀಸ್ ಗೆ ಸಮಯ ಕೊಡಲು ಸಾಧ್ಯವಾಗಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಜಾ ಟಾಕೀಸ್ ನಲ್ಲಿ ಈಗ ಹೊಸ ತಂಡವೇ ಇದೆ. ಯೋಗರಾಜ್ ಭಟ್, ವಿನೋದ್ ಗೊಬ್ರಗಾಲ, ಚಂದ್ರಪ್ರಭಾ, ಪ್ರಿಯಾಂಕಾ, ಶಿವು, ಪ್ರಿಯಾಂಕಾ ಕಾಮತ್, ತುಕಾಲಿ ಸಂತು ಮೊದಲಾದವರು ಸೇರ್ಪಡೆಯಾಗಿದ್ದಾರೆ. ಕುರಿ ಪ್ರತಾಪ್ ಹಾಗೂ ತರಂಗ ವಿಶ್ವ ಇದ್ದಾರೆ. ಪ್ರೇಕ್ಷಕರು ಹೊಸಬರ ಮಜಾ ಟಾಕೀಸ್ ನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: