ಮನೆ ಕೆಲಸದವಳೊಂದಿಗೆ ಸಲುಗೆ: ಸುಪಾರಿ ನೀಡಿ ಪತಿಯ ಕಾಲು ಮುರಿಸಿದ ಪತ್ನಿ!
![kalburgi](https://www.mahanayaka.in/wp-content/uploads/2025/02/kalburgi.jpg)
ಕಲಬುರಗಿ: ಪರಸ್ತ್ರೀ ಜೊತೆಗೆ ಸಲುಗೆಯಿಂದ ಇದ್ದ ಪತಿಗೆ ಬುದ್ಧಿ ಕಲಿಸಲು ಪತ್ನಿಯೊಬ್ಬಳು ಗೂಂಡಾಗಳಿಗೆ ಸುಪಾರಿ ನೀಡಿ, ಆತನ ಕಾಲು ಮುರಿದು ಹಾಕಿಸಿದ ಘಟನೆ ನಡೆದಿದ್ದು, ಇದೀಗ ಜೈಲು ಸೇರಿದ್ದಾಳೆ.
ಕಲಬುರಗಿ ನಗರದ ಅತ್ತರ್ ಕಾಂಪೌಂಡ್ ಏರಿಯಾದ ವೆಂಕಟೇಶ ಮಾಲಿ ಪಾಟೀಲ್(62) ಕಾಲು ಮುರಿಸಿಕೊಂಡ ಪತಿಯಾಗಿದ್ದು, ಪತ್ನಿ ಉಷಾ ಪಾಟೀಲ್ ಪತಿಯ ಕಾಲು ಮುರಿಸಿದ ಮಹಿಳೆಯಾಗಿದ್ದಾಳೆ.
ಮಹಿಳೆಯಿಂದ ಸುಪಾರಿ ಪಡೆದ ಮನೋಹರ, ಸುನೀಲ್, ಆರೀಫ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದು, ಇದೀಗ ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.
ವೆಂಕಟೇಶ್ ಅವರ ಪುತ್ರ ದರೋಡೆಗಾಗಿ ತಂದೆಯ ಕಾಲು ಮುರಿದಿರುವುದಾಗಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ಆರೋಪಿಗಳು ವೆಂಕಟೇಶ್ ಅವರ ಪತ್ನಿ ಉಷಾ ಅವರ ಹೆಸರು ಹೇಳಿದ್ದು, ಅವರು ನೀಡಿ ಸುಪಾರಿಯ ಹಿನ್ನೆಲೆ ಹಲ್ಲೆ ನಡೆಸಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಮನೆ ಕೆಲಸದವಳೊಂದಿಗೆ ವೆಂಕಟೇಶ್ ಸಲುಗೆಯಿಂದ ಇರುವುದನ್ನು ನೋಡಿ ಪತ್ನಿ ಉಷಾಗೆ ಇದು ಸರಿ ಬರುತ್ತಿಲ್ಲ ಎಂದು ಕೋಪ ಬಂದಿದ್ದು, ಆತ ಕಾಲು ಮುರಿದುಕೊಂಡು ಮನೆಯಲ್ಲೇ ಬಿದ್ದಿರಬೇಕು ಎಂದು ಕಾಲು ಮುರಿಸಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಉಷಾ ಬಾಯ್ಬಿಟ್ಟಿದ್ದಾಳೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: