ಪತ್ನಿ ಪರ್ದಾ ಧರಿಸದಿರುವುದು ಕ್ರೌರ್ಯವಲ್ಲ: ಅದು ವಿಚ್ಛೇದನಕ್ಕೆ ಕಾರಣವಾಗಬಾರದು: ಕೋರ್ಟ್ ಅಭಿಪ್ರಾಯ

03/01/2025

ಬುರ್ಖಾ ಧರಿಸುವುದನ್ನು ತ್ಯಜಿಸುವ ಮಹಿಳೆಯ ಆಯ್ಕೆಯು ಪತಿಯ ಮೇಲಿನ ಕ್ರೌರ್ಯವಲ್ಲ. ಆದ್ದರಿಂದ ವಿಚ್ಛೇದನ ಪಡೆಯಲು ಆಧಾರವಾಗಿ ಬಳಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಕೆಳ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಮತ್ತು ನ್ಯಾಯಮೂರ್ತಿ ದೊನಾಡಿ ರಮೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪತಿ ಮತ್ತು ಪತ್ನಿ 23 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರಿಂದ ನ್ಯಾಯಾಲಯವು ವಿಚ್ಛೇದನವನ್ನು ಪಡೆಯಲು ಹೇಳಿತ್ತು.

ವಿಚ್ಛೇದನ ಪಡೆಯಲು ಪತಿ ಎರಡು ಕಾರಣಗಳನ್ನು ಉಲ್ಲೇಖಿಸಿದ್ದರು. ಮಾನಸಿಕ ಕ್ರೌರ್ಯ, ತನ್ನ ಹೆಂಡತಿ ಸ್ವತಂತ್ರಳು ಎಂದು ಹೇಳಿಕೊಳ್ಳುವುದು, ಆಗಾಗ್ಗೆ ಸ್ವಂತವಾಗಿ ಹೊರಗೆ ಹೋಗುವುದು ಮತ್ತು ‘ಪರ್ದಾ’ ಸಂಪ್ರಾದಾಯವನ್ನು ಅನುಸರಿಸದಿರುವುದು ಆಗಿತ್ತು.
ಈ ಜೋಡಿ ಫೆಬ್ರವರಿ 26, 1990 ರಂದು ವಿವಾಹವಾಗಿತ್ತು ಮತ್ತು ಅವರ ‘ಗೌನಾ’ ಸಮಾರಂಭವು ಡಿಸೆಂಬರ್ 4, 1992 ರಂದು ನಡೆದಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version