ಕಂಠಪೂರ್ತಿ ಕುಡಿದು ಬಾವಿಗೆ ಬಿದ್ದ ಪತಿಯನ್ನು 4 ದಿನಗಳ ನಂತರ ರಕ್ಷಿಸಿದ ಪತ್ನಿ! - Mahanayaka
5:10 PM Wednesday 11 - December 2024

ಕಂಠಪೂರ್ತಿ ಕುಡಿದು ಬಾವಿಗೆ ಬಿದ್ದ ಪತಿಯನ್ನು 4 ದಿನಗಳ ನಂತರ ರಕ್ಷಿಸಿದ ಪತ್ನಿ!

well
05/12/2022

ಅಲಿಘರ್: ಕಂಠಪೂರ್ತಿ ಕುಡಿದು ಬಾವಿಯೊಂದಕ್ಕೆ ಬಿದ್ದ ಪತಿಯನ್ನು ನಾಲ್ಕು ದಿನಗಳ ನಂತರ ಪತ್ನಿಯೇ ಪತ್ತೆ ಹಚ್ಚಿದ ಘಟನೆ ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯ ಜಿಲ್ಲಾ ಪ್ರದೇಶದಲ್ಲಿ ನಡೆದಿದೆ.

ಯೋಗೇಂದ್ರ ಯಾದವ್ ಎಂಬ ಈ ಟ್ರಕ್ ಚಾಲಕ ಮಣ್ಣು ಅನ್ ಲೋಡ್ ಮಾಡಲು ತೆರಳಿದ್ದ. ಈ ವೇಳೆ ಸಮೀಪದ ಹೋಟೆಲ್ ನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಊಟ ಮಾಡಿದ್ದಾನೆ.
ಮೂತ್ರ ವಿಸರ್ಜನೆಗಾಗಿ ಸಮೀಪದಲ್ಲಿದ್ದ ಬಾವಿ ಪಕ್ಕಕ್ಕೆ ಹೋಗಿದ್ದು, ಆಯತಪ್ಪಿ ಬಾವಿಗೆ ಬಿದ್ದಿದ್ದಾನೆ.

ಇತ್ತ ಆತನ ಪತ್ನಿ ಶ್ರದ್ಧಾ ಪತಿ ಬಾರದೇ ಇದ್ದಾಗ ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಆತ ಪತ್ತೆಯಾಗದಿದ್ದ ವೇಳೆ ಪೊಲೀಸರಿಗೆ ದೂರು ನೀಡಿದ್ದು, ದೂರು ನೀಡಿ 4 ದಿನಗಳಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಕೊನೆಗೆ ಪತಿಯನ್ನು ಹುಡುಕಾಡುತ್ತಾ ಹೊರಟ ಶ್ರದ್ಧಾ, ಆತ ಕಾಣೆಯಾಗಿದ್ದ ಪ್ರದೇಶಕ್ಕೆ ಹೋಗಿದ್ದು, ಅಲ್ಲಿದ್ದ ಬಾವಿಗೆ ಇಣುಕಿ ನೋಡಿದ ವೇಳೆ ಪತಿಯ ಸ್ವೆಟರ್ ಕಂಡು ಬಂದಿದೆ. ಬಳಿಕ ತಕ್ಷಣವೇ ಸ್ಥಳೀಯರ ಸಹಾಯದೊಂದಿಗೆ ಆತನನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದೆ.

ಬಾವಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತಿಯನ್ನು ರಕ್ಷಿಸುವಲ್ಲಿ ಕೊನೆಗೂ ಪತ್ನಿ ಶ್ರದ್ಧಾ ಯಶಸ್ವಿಯಾಗಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ