10:12 AM Wednesday 23 - April 2025

ರಾಜಣ್ಣ ಹೋದ್ರು, ವಿಷ್ಣು ಹೋದ, ಅಂಬರೀಶ್‌ ಹೋದ ಎಂದು ಕಣ್ಣೀರು ಹಾಕಿದ್ರಂತೆ ದ್ವಾರಕೀಶ್

dwarakish
17/04/2024

ದ್ವಾರಕೀಶ್ ಅವರ ನಿಧನದ ಬಗ್ಗೆ ಅವರ ಎರಡನೇ ಪತ್ನಿ ಶೈಲಜಾ ಭಾವುಕ ನುಡಿಗಳನ್ನಾಡಿದ್ದು, ಅವರ ಜೊತೆಗೆ ಜೀವನ ಮಾಡಲು ನಾನು ತುಂಬಾ ಅದೃಷ್ಟ ಮಾಡಿದ್ದೆ ಎಂದು ಹೇಳಿದ್ದಾರೆ.

“ನನ್ನದು ಅವರದು 38 ವರ್ಷಗಳ ಸಂಬಂಧ. ಅದನ್ನು ಹಾಗೇ ಹೇಳಲು ಆಗದು. ನಾನು ಪ್ರೀತಿಸಿದೇ ಎಂಬುದಕ್ಕಿಂತ ಅವರು ಪ್ರೀತಿಸಿದ್ದೇ ಜಾಸ್ತಿ. ತುಂಬ ಹಚ್ಚಿಕೊಂಡಿದ್ದರು. ನನ್ನನ್ನು ದೂರ ತಳ್ಳಲಿಲ್ಲ. ಅಂಬುಜಕ್ಕ ಇದ್ದರೂ, ನನ್ನನ್ನು ಎರಡನೇ ಹೆಂಡ್ತಿ ಅಂತ ಯಾರೂ ನೋಡಲಿಲ್ಲ. ಮನೆಯವಳೇ ಆಗಿ ಹೋದೆ ನಾನು. ಮಕ್ಕಳೂ ಅಷ್ಟೇ ಆವಾಗ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ನಾನು ತುಂಬ ಅದೃಷ್ಟ ಮಾಡಿದ್ದೆ.  ಒಂದು ದಿನ ನನ್ನ ಮನಸ್ಸು ನೋಯಿಸಲಿಲ್ಲ. ಒಂದು ದಿನ ನನಗೆ ಬೇಜಾರು ಮಾಡಲಿಲ್ಲ ಎಂದು ಹೇಳಿದ್ದಾರೆ.

ಸಾವಿನ ಭಯ ಅವರಲ್ಲಿ ಕಾಡುತ್ತಿತ್ತು:

ರಾಜಣ್ಣ ಹೋದ್ರು, ವಿಷ್ಣು ಹೋದ, ಅಂಬರೀಶ್‌ ಹೋದ.. ಪುಟ್ಟ ಎಲ್ಲರೂ ಹೋಗ್ತಿದ್ದಾರೆ. ನಾನು ಒಂಟಿಯಾಗ್ತಿದ್ದೀನಿ ಅಂತ ನನ್ನ ಮುಂದೆ ದ್ವಾರಕೀಶ್ ಕಣ್ಣೀರು ಸುರಿಸಿದ್ದರು ಎಂದು ಶೈಲಜಾ ಹೇಳಿದರು.

ನನ್ನ ಜೊತೆಗೆ ಯಾರೂ ಇಲ್ಲ, ನನ್ನ ಸ್ನೇಹಿತರೆಲ್ಲ ಹೊರಟು ಹೋದರು. ವಿಷ್ಣು ಅವರ ಸಾವಾದಾಗ ತುಂಬ ಅತ್ತರು. ನಾನು ಅದ್ಯಾವಾಗ ಹೋಗಿಬಿಡ್ತಿನೋ ಅನ್ನೋ ಭಯ ಅವರಿಗೂ ಇತ್ತು. ಇತ್ತೀಚಿನ ದಿನಗಳಲ್ಲಿ ಆ ಭಯ ಚೂರು ಜಾಸ್ತಿನೇ ಆಗಿತ್ತು. ವಾಕಿಂಗ್‌ ಹೋಗಲು ಹೆದರುವವರು, ಫ್ಯಾನ್‌ ಮೇಲೆ ಬಿದ್ದರೆ ಏನ್‌ ಕಥೆ? ಒಬ್ಬರೇ ಇರುತ್ತಿರಲಿಲ್ಲ, ಯೋಗಿ ಕಣ್ಣಿಗೆ ಕಾಣಲಿಲ್ಲ ಅಂದರೆ ಭಯಪಡೋರು. ಈಗ ಅವರನ್ನೇ ಕಳೆದುಕೊಂಡಿದ್ದೇವೆ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version