ಟೆಲಿಗ್ರಾಮ್  ಗ್ರೂಪ್ ಮೂಲಕ ಹಣ, ಲೈಂಗಿಕತೆಗಾಗಿ ಪತ್ನಿಯರ ವಿನಿಮಯ | ವಿಲಕ್ಷಣ ಘಟನೆ - Mahanayaka

ಟೆಲಿಗ್ರಾಮ್  ಗ್ರೂಪ್ ಮೂಲಕ ಹಣ, ಲೈಂಗಿಕತೆಗಾಗಿ ಪತ್ನಿಯರ ವಿನಿಮಯ | ವಿಲಕ್ಷಣ ಘಟನೆ

wife swapping racket
10/01/2022

ಕೊಟ್ಟಾಯಂ:  ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್ ನಲ್ಲಿ ವಿಲಕ್ಷಣ ಘಟನೆಯೊಂದು ವರದಿಯಾಗಿದ್ದು, ಟೆಲಿಗ್ರಾಮ್  ಗ್ರೂಪ್ ಮೂಲಕ ಹಣ ಹಾಗೂ ಲೈಂಗಿಕ ಸುಖಕ್ಕಾಗಿ ಪತ್ನಿಯರನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಗ್ರೂಪ್ ನಲ್ಲಿರುವ ಪುರುಷರು ತಮ್ಮ ಪತ್ನಿಯರನ್ನು ಹಣಕ್ಕಾಗಿ ಮತ್ತು ಇತರ ಮಹಿಳೆಯರ ಜೊತೆಗೆ ಲೈಂಗಿಕ ಸಂಪರ್ಕ ಹೊಂದಲು ಪತ್ನಿಯರನ್ನು ವಿನಿಮಯ ಮಾಡಿಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಪ್ರಕರಣವನ್ನು ಭೇದಿಸಿರುವ ಕೇರಳ ಪೊಲೀಸರು ಈಗಾಗಲೇ 7 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಈ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಟೆಲಿಗ್ರಾಮ್ ಮಾತ್ರವಲ್ಲದೇ ಮೆಸೆಂಜರ್ ಗ್ರೂಪ್ ಮೂಲಕವೂ ಈ ದಂಧೆ ನಡೆಯುತ್ತಿತ್ತು ಎನ್ನಲಾಗಿದ್ದು, ಹಣವಂತರೇ  ಗ್ರೂಪ್ ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಈ ಗ್ರೂಪ್ ನಲ್ಲಿದ್ದ ಕೆಲವರು ಹಣಕ್ಕಾಗಿ ತಮ್ಮ ಪತ್ನಿಯರನ್ನು ಪರ ಪುರುಷರ ಬಳಿಗೆ ಕಳುಹಿಸುತ್ತಿದ್ದರೆ, ಇನ್ನು ಕೆಲವರು ಇತರರ ಪತ್ನಿಯ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಲು ತಮ್ಮ ಪತ್ನಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು  ಎನ್ನಲಾಗಿದೆ. ಮಹಿಳೆಯೊಬ್ಬಳನ್ನು  ಮೂವರು ಪುರುಷರು ಹಂಚಿಕೊಂಡಿರುವ ಘಟನೆ ಕೂಡ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆ ಬೆಳಕಿಗೆ ಬಂದ ಬಳಿಕ ಈ ಗ್ರೂಪ್ ನ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು,  ಈ ಗುಂಪು ಬೇರೆ ಇತರ ಗುಂಪುಗಳ ಜೊತೆಗೆ ಸಂಪರ್ಕ ಹೊಂದಿದೆಯೇ ಎಂಬ ಬಗ್ಗೆ ಪೊಲೀಸರು ಜಾಲಾಡುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಂಬೇಡ್ಕರ್ ಸಂಘ ಸ್ಥಾಪಿಸುವುದನ್ನು ವಿರೋಧಿಸಿ ದಲಿತರ ಮೇಲೆ ಹಲ್ಲೆ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಕೊವಿಡ್ ದೃಢ

ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ಬ್ಲ್ಯಾಕ್ ಮೇಲ್: ಆರೋಪಿ ರಾಹುಲ್ ಭಟ್ ಸಿಸಿಬಿ ವಶಕ್ಕೆ

ಟಿವಿ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕ

 

ಇತ್ತೀಚಿನ ಸುದ್ದಿ