ಪ್ರಿಯಕರ ಪತಿಯ ಹತ್ಯೆ ಮಾಡುವುದನ್ನು ವಿಡಿಯೋ ಕಾಲ್ ನಲ್ಲಿ ನೋಡಲು ಪತ್ನಿಯಿಂದ ಯತ್ನ!

ಬೆಳಗಾವಿ: ಪ್ರಿಯಕರನಿಂದ ತನ್ನ ಪತಿಯನ್ನು ಹತ್ಯೆ ಮಾಡಿಸಿರುವ ಮಹಿಳೆಯೊಬ್ಬಳು, ಹತ್ಯೆಯ ದೃಶ್ಯವನ್ನು ವಿಡಿಯೋ ಕಾಲ್ ಮೂಲಕ ನೋಡಲು ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಸದ್ಯ ಹತ್ಯೆ ಮಾಡಿರುವ ಪ್ರಿಯಕರ ಹಾಗೂ ಹತ್ಯೆಗೊಳಗಾಗಿರುವ ವ್ಯಕ್ತಿಯ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಾನಾಪುರ ತಾಲೂಕಿನ ಬಲೋಗಿ ಗ್ರಾಮದ ಶೈಲಾ ಶಿವನಗೌಡ ಪಾಟೀಲ(40) ಬಂಧಿತ ಮಹಿಳೆಯಾಗಿದ್ದಾಳೆ. ಏಪ್ರಿಲ್ 1ರಂದು ರಾತ್ರಿ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಶಿವನಗೌಡ ಪಾಟೀಲ ಎಂಬಾತನ ಬರ್ಬರ ಹತ್ಯೆಯಾಗಿತ್ತು. ಈ ವೇಳೆ ಹತ್ಯೆಗೊಳಗಾಗಿರುವ ವ್ಯಕ್ತಿಯ ಪತ್ನಿ ಶೈಲಾ ಶಿವನಗೌಡ ಪಾಟೀಲ ಮೃತದೇಹದ ಬಳಿ ಗೋಳೋ ಎಂದು ಅತ್ತು ಕರೆದು ರಂಪಾಟ ಮಾಡಿದ್ದಳು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು 24 ಗಂಟೆಗಳಲ್ಲಿ ಆರೋಪಿ ರುದ್ರಪ್ಪ ಹೊಸೆಟ್ಟಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶಿವನಗೌಡ ಪಾಟೀಲನ ಪತ್ನಿಯ ಜೊತೆಗೆ ತನಗೆ ಅನೈತಿಕ ಸಂಬಂಧವಿದ್ದು, ಆಕೆ ಹೇಳಿದಂತೆ ಶಿವನಗೌಡ ಪಾಟೀಲನಿಗೆ ಮದ್ಯ ಕುಡಿಸಿ ಹತ್ಯೆ ಮಾಡಿರುವುದಾಗಿ ರುದ್ರಪ್ಪ ಬಾಯ್ಬಿಟ್ಟಿದ್ದಾನೆ.
ಏಪ್ರಿಲ್ 1ರಂದು ಗಾಡಿಕೊಪ್ಪ ಗ್ರಾಮದ ಹೊರವಲಯಕ್ಕೆ ಶಿವನಗೌಡನನ್ನು ಕಂಠಪೂರ್ತಿ ಮದ್ಯ ಕುಡಿಸಿ ರುದ್ರಪ್ಪ ಹತ್ಯೆ ಮಾಡಿದ್ದ. ಬಳಿಕ ಈ ವಿಚಾರವನ್ನು ಶೈಲಾ ಪಾಟೀಲ್ ಗೆ ತಿಳಿಸಿದ್ದ. ಈ ವೇಳೆ ಶೈಲಾ ವಿಡಿಯೋ ಕಾಲ್ ಮೂಲಕ ಪತಿಯ ಹತ್ಯೆಯನ್ನು ನೋಡಲು ಬಯಸಿದ್ದಳು. ಆದರೆ, ನೆಟ್ ವರ್ಕ್ ಸಮಸ್ಯೆಯಿಂದ ನೋಡಲು ಸಾಧ್ಯವಾಗದ ಕಾರಣ ಮೊಬೈಲ್ ಕರೆ ಮಾಡಿ ಮಾತನಾಡಿದ್ದಳು ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: