ಕಾಡುಕೋಣ ದಾಳಿ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೃದ್ಧನ ದಾರುಣ ಸಾವು

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡುಕೋಣ ದಾಳಿಯಿಂದ ವೃದ್ಧ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ಭೀಕರವಾಗಿ ದಾಳಿ ನಡೆಸಿದ್ದು, ಪರಿಣಾಮವಾಗಿ ವೃದ್ಧ ಸಾವನ್ನಪ್ಪಿದ್ದಾರೆ.
ರಘುಪತಿ (73) ಕಾಡುಕೋಣದ ದಾಳಿಗೆ ಸಾವನ್ನಪ್ಪಿದವರಾಗಿದ್ದಾರೆ. ಇವರು ಕೃಷಿಕರಾಗಿದ್ದರು. ಕಳಸ ತಾಲೂಕಿನ ಹಳುವಳ್ಳಿ ಸಮೀಪದ ಲಲಿತಾದ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಫೋನ್ ರಿಸೀವ್ ಮಾಡದಿದ್ದಾಗ ತೋಟಕ್ಕೆ ಹುಡುಕಿಕೊಂಡು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಧ್ಯಾಹ್ನ ಮನೆಯಿಂದ ಕಾಫಿ ತೋಟಕ್ಕೆ ರಘುಪತಿ ತೆರಳಿದ್ದರು. ತೋಟದ ಸುತ್ತ 6 ಅಡಿ ಬೇಲಿ ಮಾಡಿದ್ರು ಅದನ್ನ ದಾಟಿ ಬಂದಿರುವ ಕಾಡುಕೋಣ, ರಘುಪತಿ ಅವರ ಮೇಲೆ ದಾಳಿ ನಡೆಸಿದೆ.
ಕಾಡುಕೋಣ ದಾಳಿಯಿಂದ ಕೃಷಿಕನ ಸಾವಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರ ಕಾಡುಕೋಣ ಹಾವಳಿಂದ ಕಂಗಾಲಾಗಿರುವ ಬೆಳೆಗಾರರು, ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಗಳಲ್ಲಿಯೂ ಕಾಡುಕೋಣಗಳು ಅಡ್ಡಲಾಗಿ ನಿಲ್ತಿವೆ. ಹಲವು ಬಾರಿ ಮನವಿ ಮಾಡಿದ್ರು ಅರಣ್ಯ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬಂದಿದ್ದು, ವೃದ್ಧನ ಸಾವಿಗೆ ಅರಣ್ಯ ಇಲಾಖೆಯೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: