ರಾಜ್ಯ ರಾಜಕಾರಣದಲ್ಲಿ ಸಂಚಲನ: ಅವಮಾನಿತ ಹಿರಿಯ ಬಿಜೆಪಿ ನಾಯಕರು ಗಾಳಿ ಜನಾರ್ಧನ ರೆಡ್ಡಿ ಪಕ್ಷಕ್ಕೆ ಸೇರ್ಪಡೆಯಾಗ್ತಾರಾ?
ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಘೋಷಣೆಯಾಗಿದ್ದು, ಸಾಕಷ್ಟು ಹಾಲಿ ಹಾಗೂ ಪ್ರಭಾವಿಗಳಿಗೆ ಟಿಕೆಟ್ ಕೈತಪ್ಪಿದೆ. ಈ ನಡುವೆ ಬಿಜೆಪಿ ಹೈಕಮಾಂಡ್ ನಿರ್ಧಾರದ ಬಗ್ಗೆ ಪಕ್ಷದೊಳಗೆ ಕಾರ್ಯಕರ್ತರು ಹಾಗೂ ನಾಯಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಪಕ್ಷವು ಹಿರಿಯ ನಾಯಕರನ್ನು ಕೂಡ ಯಾವುದೇ ಮುಲಾಜಿಲ್ಲದೇ ಕಿತ್ತೆಸೆದಿರುವುದರಿಂದ ಹಿರಿಯ ನಾಯಕರಿಗೆ ತೀವ್ರ ಅವಮಾನವಾಗಿದೆ. ಪಕ್ಷ ನಮ್ಮನ್ನು ಸೌಜನ್ಯಕ್ಕೂ ಮಾತನಾಡಿಸಲಿಲ್ಲ ಎಂಬ ನೋವನ್ನು ಟಿಕೆಟ್ ಕಳೆದುಕೊಂಡ ಹಿರಿಯ ನಾಯಕರು ತೋಡಿಕೊಂಡಿದ್ದಾರೆ.
ಪಕ್ಷದ ಪರವಾಗಿ ನಿಂತು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷಣ ಸವದಿ ಮೂಲೆಗುಂಪಾಗಿದ್ದಾರೆ. ಇನ್ನೊಂದೆಡೆ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನು ಕೂಡ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಅನ್ನೋ ಆಕ್ರೋಶಗಳು ಕೇಳಿ ಬಂದಿವೆ.
ಈ ನಡುವೆ ಟಿಕೆಟ್ ವಂಚಿತ, ಅವಮಾನಿತ ಎಲ್ಲ ಹಿರಿಯ ನಾಯಕರು ಗಾಳಿ ಜನಾರ್ಧನ ರೆಡ್ಡಿ ಅವರ ಹೊಸ ಪಕ್ಷ ಸೇರ್ಪಡೆಯ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಬಿಜೆಪಿಯ ಅಸಮಾಧಾನಿತ ಗುಂಪಿನ ನಡುವೆ ಇಂತಹದ್ದೊಂದು ಚರ್ಚೆ ದೊಡ್ಡಮಟ್ಟದಲ್ಲಿ ಕೇಳಿ ಬಂದಿದೆ.
ಕೆಲವೇ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುತ್ತದೆ. ಹಿರಿಯ ನಾಯಕರೆಲ್ಲ ಸೇರಿ ತಮ್ಮ ಶಕ್ತಿಯನ್ನು ಮಾತೃ ಪಕ್ಷಕ್ಕೆ ತೋರಿಸಲು ಮುಂದಾಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಹಿಂದೆಯೇ ನಡೆದಿತ್ತಾ ಸಂಚು?
ಈಶ್ವರಪ್ಪ, ಜಗದೀಶ್ ಶೆಟ್ಟರ್ ಟೀಮನ್ನು ಸಂಪೂರ್ಣವಾಗಿ ತೆಗೆಯುತ್ತೇವೆ ಎಂಬ ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲು ಕಾರಣ ಏನು ಎಂಬ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw