ಸಿರಿಯಾದ ನೆಲವನ್ನು ಬಳಸಿಕೊಂಡು ಇಸ್ರೇಲ್ ಮೇಲೆ ದಾಳಿ ನಡೆಸುವುದಕ್ಕೆ ಅವಕಾಶ ನೀಡಲ್ಲ: ಹೊಸ ಬಂಡುಕೋರ ಸರ್ಕಾರದ ಮುಖ್ಯಸ್ಥ
ಸಿರಿಯಾದ ನೆಲವನ್ನು ಬಳಸಿಕೊಂಡು ಇಸ್ರೇಲ್ ಮೇಲೆ ದಾಳಿ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿರಿಯಾದ ಹೊಸ ಬಂಡುಕೋರ ಸರ್ಕಾರದ ಮುಖ್ಯಸ್ಥ ಅಬು ಮೊಹಮ್ಮದ್ ಜುಲಾನಿ ಹೇಳಿದ್ದಾರೆ. ದಿ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜುಲಾನಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಸದ್ ಆಡಳಿತದ ವೇಳೆ ಸಿರಿಯಾದ ಮೇಲೆ ಹಾಕಲಾದ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ಪಾಶ್ಚಾತ್ಯ ರಾಷ್ಟ್ರಗಳಿಗೆ ಈತ ಮನವಿ ಮಾಡಿದ್ದಾರೆ.
ನಮ್ಮ ನೆಲವನ್ನು ಬಳಸಿಕೊಂಡು ಇಸ್ರೇಲ್ ನ ವಿರುದ್ಧವೋ ಅಥವಾ ಇನ್ನಾವುದಾದರೂ ರಾಷ್ಟ್ರಗಳ ವಿರುದ್ಧವೋ ಆಕ್ರಮಣ ನಡೆಸುವುದಕ್ಕೆ ಬಿಡುವುದಿಲ್ಲ. ಸಿರಿಯಾದ ಮೇಲಿನ ಇಸ್ರೇಲ್ ವೈಮಾನಿಕ ದಾಳಿಯನ್ನು ನಿಲ್ಲಿಸಬೇಕು. ಇಸ್ರೇಲ್ ಈಗ ಆಕ್ರಮಣಕ್ಕೆ ಇಳಿದಿರುವುದಕ್ಕೆ ಹಿಝ್ಬುಲ್ಲ ಮತ್ತು ಇರಾನ್ ಹೋರಾಟಗಾರರು ಸಿರಿಯಾದಲ್ಲಿದ್ದಾರೆ ಎಂಬುದು ಕಾರಣವಾಗಿರಬಹುದು. ಇನ್ನು ಮುಂದೆ ಆ ಸಮರ್ಥನೆಗೆ ಅವಕಾಶ ಇಲ್ಲ. ಅಸದ್ ಪಲಾಯನ ಮಾಡಿದ ಬಳಿಕ ಹಿಡಿದಿಟ್ಟುಕೊಂಡ ಪ್ರದೇಶದಿಂದ ಇಸ್ರೇಲ್ ಹಿಂದಕ್ಕೆ ಸರಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಸ್ರೇಲ್ ಜೊತೆಗೆ ಘರ್ಷಣೆ ಇಲ್ಲ ಎಂದು ಈ ಮೊದಲೂ ಜುಲಾನಿ ಹೇಳಿದ್ದರು. ಸಿರಿಯಾದ ಪುನರ್ ನಿರ್ಮಾಣಕ್ಕೆ ನಮ್ಮ ಪ್ರಥಮ ಆದ್ಯತೆ ಮತ್ತು ಇನ್ನಷ್ಟು ಸಂಘರ್ಷಗಳಿಗೆ ಸಿರಿಯಾವನ್ನು ಎತ್ತಿ ಹಾಕುವುದಕ್ಕೆ ನಾನಿಲ್ಲ ಎಂದು ಕೂಡ ಜುಲಾನಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj