ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗೆ ‘ಉಚಿತ ಮೊಬೈಲ್’: ಬಿಜೆಪಿಗೆ ಹೊಸ ತಲೆನೋವು..!
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ‘ಉಚಿತ ಮೊಬೈಲ್ ಯೋಜನೆ 2023’ ರ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಗಳನ್ನು ನೀಡಲು ತೀರ್ಮಾನಿಸಿದ್ದಾರೆ.
ಮೂಲಗಳ ಪ್ರಕಾರ ಇದು ರಾಜ್ಯದ ಸುಮಾರು 1.33 ಕೋಟಿ ಅರ್ಹ ಮಹಿಳೆಯರಿಗೆ ಪ್ರಯೋಜನವಾಗಲಿದೆ. ಅತ್ತ ಈ ಕುರಿತು ಬಿಜೆಪಿ ನಾಯಕರು ವಿರೋಧದ ಹೇಳಿಕೆ ನೀಡುತ್ತಿದ್ದಾರೆ.
ವಿಶ್ವದ ಅಗ್ಗದ ಇಂಟರ್ ನೆಟ್ ಸೇವೆಗಳನ್ನು ಭಾರತದಲ್ಲಿ ಮಹಿಳೆಯರು ಪಡೆಯುತ್ತಿರುವ ಸಮಯದಲ್ಲಿ ಗೆಹ್ಲೋಟ್ ಸರ್ಕಾರ ಈ ಘೋಷಣೆ ಮಾಡಲು ತಡವಾಗಿದೆ ಎಂದು ಬಿಜೆಪಿ ನಾಯಕಿ ನಿಮಿಷಾ ಹೇಳಿಕೆ ನೀಡಿದ್ರೆ, ಅತ್ತ ಕಾಂಗ್ರೆಸ್ ವಕ್ತಾರೆ ಸ್ವರ್ಣಿಮ್ ಚತುರ್ವೇದಿ ಈ ಯೋಜನೆಯು ರಾಜ್ಯದ ಮಹಿಳೆಯರ ಬೆಳವಣಿಗೆಯಲ್ಲಿ ಹೊಸ ಕಥೆಯನ್ನು ಬರೆಯುತ್ತದೆ ಎಂದು ಹೇಳಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ನೇರವಾಗಿ ಸಹಾಯ ಮಾಡುವ ಅನೇಕ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸುತ್ತಿದೆ. ಅವರು ಈಗ 500 ರೂ.ಗೆ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಅಲ್ಲದೆ ರಾಜ್ಯ ಸರ್ಕಾರವು ಉಚಿತ ಔಷಧಿಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ಪ್ರಾರಂಭಿಸುತ್ತಿದೆ. ಜೊತೆಗೆ ಉಚಿತ ಮೊಬೈಲ್ ಯೋಜನೆ ಕೂಡಾ ಶೀಘ್ರದಲ್ಲೇ ಜಾರಿಗೆ ಬರಲಿದೆ. ಎಂದು ಚತುರ್ವೇದಿ ಹೇಳಿದ್ದಾರೆ.
ಅತ್ತ ಬಿಜೆಪಿ ಮುಖಂಡೆ ನಿಮಿಷಾ, ‘ಭಾರತವು ವಿಶ್ವದ ಎರಡನೇ ಅಗ್ರ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ಪ್ರಸ್ತುತ ಸಮಯದಲ್ಲಿ, ದೇಶದ ಪ್ರತಿಯೊಬ್ಬ ನಾಗರಿಕರು ಮೊಬೈಲ್ ಬಳಸುತ್ತಿದ್ದಾರೆ. ಗೆಹ್ಲೋಟ್ ಜಿ ದೇರ್ ಸೆ ಜಾಗೆ (ಗೆಹ್ಲೋಟ್ ತಡವಾಗಿ ಎಚ್ಚರಗೊಂಡಿದ್ದಾರೆ) ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರವು ಮೂರು ಹಂತಗಳಲ್ಲಿ 1.33 ಕೋಟಿ ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಗಳನ್ನು ನೀಡುವುದಾಗಿ ಘೋಷಿಸಿದೆ. ಮೊದಲ ಹಂತವು ರಕ್ಷಾಬಂಧನದ ಸಮಯದಲ್ಲಿ ನಡೆಯಲಿದೆ. ಇದರಲ್ಲಿ 40 ಲಕ್ಷ ಮಹಿಳೆಯರಿಗೆ ಫೋನ್ ಗಳನ್ನು ವಿತರಿಸುವ ಭರವಸೆ ನೀಡಲಾಗಿದೆ.
ಗೆಹ್ಲೋಟ್ 2022-23ರ ಬಜೆಟ್ ಭಾಷಣದಲ್ಲಿ ರಾಜಸ್ಥಾನದಲ್ಲಿ ಉಚಿತ ಮೊಬೈಲ್ ಯೋಜನೆ 2023 ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಈ ಯೋಜನೆಯ ಮೂಲಕ ರಾಜ್ಯದ 1.33 ಕೋಟಿ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಉಚಿತ ಮೊಬೈಲ್ ಫೋನ್ ಗಳನ್ನು ನೀಡಲಾಗುವುದು. ಈ ಮೊಬೈಲ್ ಗಳಲ್ಲಿ 3 ವರ್ಷಗಳವರೆಗಿನ ಇಂಟರ್ನೆಟ್ ಡೇಟಾವನ್ನು ಸಹ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಎಂದಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯು ಗೇಮ್ ಚೇಂಜರ್ ಆಗಬಹುದೇ ಎಂಬ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw