ಕಾಂಗ್ರೆಸ್ ತೊರೆಯುತ್ತಾರ ಶಶಿ ತರೂರ್? ಕೈ ಸಂಸದ ಹೇಳಿದ್ದೇನು? - Mahanayaka
12:36 AM Friday 28 - February 2025

ಕಾಂಗ್ರೆಸ್ ತೊರೆಯುತ್ತಾರ ಶಶಿ ತರೂರ್? ಕೈ ಸಂಸದ ಹೇಳಿದ್ದೇನು?

25/02/2025

“ಕಾಂಗ್ರೆಸ್‌ ಪಕ್ಷಕ್ಕೆ ನನ್ನ ಅವಶ್ಯಕತೆ ಇಲ್ಲ ಎಂದಾದರೆ ನನ್ನ ಬಳಿ ಆಯ್ಕೆಗಳಿವೆ” ಎಂದು ಹೇಳಿರುವ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ತಮ್ಮ ಹೇಳಿಕೆಗಳಿಗೆ ಪೂರಕ ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪಿಯೂಷ್‌ ಗೋಯಲ್‌ ರೊಂದಿಗೆ ಶಶಿ ತರೂರ್‌ ಸೆಲ್ಫಿಗೆ ಪೋಸ್‌ ನೀಡಿರುವುದು ಸಾಕ್ಷಿ ಒದಗಿಸಿದೆ.

ಭಾರತ-ಯುಕೆ ವ್ಯಾಪಾರ ಒಪ್ಪಂದದ ಚರ್ಚೆಯಲ್ಲಿ ಭಾಗವಹಿಸಿದ್ದ ಶಶಿ ತರೂರ್‌, ಈ ವೇಳೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್‌ ಗೋಯಲ್‌ ಮತ್ತು ಬ್ರಿಟನ್‌ ವ್ಯಾಪಾರ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ರೊಂದಿಗೆ ಸೆಲ್ಫಿಗೆ ಪೋಸ್‌ ನೀಡಿದ್ದಾರೆ. ಈ ಫೋಟೋ ಶಶಿ ತರೂರ್‌ ಮತ್ತು ಕಾಂಗ್ರೆಸ್‌ ನಡುವಿನ ಹಳಸಿದ ಸಂಬಂಧದ ಕುರಿತಾದ ಚರ್ಚೆಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ.
ಪಿಯೂಷ್‌ ಗೋಯಲ್‌ ರೊಂದಿಗಿನ ಸೆಲ್ಫಿ ಯನ್ನು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಶಶಿ ತರೂರ್‌ ಹಂಚಿಕೊಂಡಿದ್ದಾರೆ.

ಶಶಿ ತರೂರ್ ಕೇರಳದ ಸಿಪಿಎಂ ನೇತೃತ್ವದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರದ ನೀತಿಗಳನ್ನು ಹೊಗಳಿದ ನಂತರ‌, ಕಾಂಗ್ರೆಸ್ ಜೊತೆಗಿನ ಅವರ ಸಂಬಂಧ ಹಳಸಿದೆ ಎಂದು ಹೇಳಲಾಗುತ್ತಿದೆ.
ಶಶಿ ತರೂರ್‌ ರ ಹೊಗಳಿಕೆಯನ್ನು ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖವಾಣಿ ‘ವೀಕ್ಷಣಂ ಡೈಲಿ’ಯಲ್ಲಿ ಟೀಕಿಸಲಾಗಿದೆ.

ಇದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗಿನ ಮಾತುಕತೆಯನ್ನು ಕೊಂಡಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅವರು “ಕಾಂಗ್ರೆಸ್‌ ಪಕ್ಷಕ್ಕೆ ನನ್ನ ಅವಶ್ಯಕತೆಯಿಲ್ಲ ಎಂದಾದರೆ, ನಾನು ಅನ್ಯ ಆಯ್ಕೆಗಳತ್ತ ಗಮನಹರಿಸುವುದಾಗಿ ಹೇಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ