ಹೇಳಿಕೆಗೆ ಸ್ಪಷ್ಟನೆ ನೀಡುತ್ತ, ಗುಂಪು ಹತ್ಯೆ ಸಮರ್ಥಕರಿಗೆ ತಿರುಗೇಟು ನೀಡಿದ ಸಾಯಿ ಪಲ್ಲವಿ
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ದನದ ಹೆಸರಿನಲ್ಲಿ ಜೈಶ್ರೀರಾಮ್ ಎಂದು ಹೇಳಿ ಮಾಡುವ ಹತ್ಯೆ ಇವೆರಡೂ ಒಂದೇ ಎಂದು ಹೇಳಿಕೆ ನೀಡಿದ್ದ ಸಾಯಿ ಪಲ್ಲವಿ, ಇದೀಗ ತಮ್ಮ ಹೇಳಿಕೆಯನ್ನು ಕೆಲವು ಬಲಪಂಥೀಯರು ವಿರೋಧಿಸಿದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಇನ್ ಸ್ಟಾ ಗ್ರಾಮ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಸಾಯಿ ಪಲ್ಲವಿ, ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ಬೇರೆಯವರ ಜೀವವನ್ನು ತೆಗೆಯುವ ಹಕ್ಕು ನಮಗಿಲ್ಲ. ನಾನು ಎಂಬಿಬಿಎಸ್ ಪದವೀಧರೆಯಾಗಿ, ಎಲ್ಲ ಜೀವವೂ ಮುಖ್ಯ ಎಂದು ನಂಬಿದ್ದೇನೆ. ಎಲ್ಲ ಭಾರತೀಯರೂ ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವಳು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕುಳಿತಿದೆ. ಹಾಗಾಗಿ ನಾನು ಯಾವಾಗಲೂ ತಟಸ್ಥವಾಗಿ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ನಾನು ಮಾತನಾಡಿರುವುದನ್ನು ಕೆಲವರು ಬೇರೆ ರೀತಿಯ ಅರ್ಥದಲ್ಲಿ ಅರ್ಥೈಸಿದ್ದು ನಿಜಕ್ಕೂ ಬೇಸರ ತರಿಸುವಂತಹದ್ದಾಗಿದೆ. ಪೂರ್ತಿ ಸಂದರ್ಶನವನ್ನು ನೋಡದೇ ಕೆಲವರು ಮಾತನಾಡಿರುವುದು ಬೇಸರದ ಸಂಗತಿಯಾಗಿದೆ. ನನ್ನ ಪರವಾಗಿ ನಿಂತವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಸಾಯಿ ಪಲ್ಲವಿ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಾಗರಿಕ ವಿಚಾರಣೆ ವೇದಿಕೆ ಮತ್ತು ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ: ಪದಾಧಿಕಾರಿಗಳ ನೇಮಕ
ಸಿದ್ದರಾಮಯ್ಯ ರೋಹಿತ್ ಚಕ್ರ ತೀರ್ಥನ ಬಂಧನಕ್ಕೆ ಕರೆ ನೀಡಿದ್ದು ಅಸಂವಿಧಾನಿಕ: ನಟ ಚೇತನ್
ಪಿಯುಸಿ ಫಲಿತಾಂಶ: ದಕ್ಷಿಣ ಕನ್ನಡ ಮೇಲುಗೈ, ಚಿತ್ರದುರ್ಗಕ್ಕೆ ಕೊನೆಯ ಸ್ಥಾನ
ಗುರುದ್ವಾರದಲ್ಲಿ ಸ್ಫೋಟ: ಇಬ್ಬರು ಸಾವು, ಹಲವರನ್ನು ಒತ್ತೆಯಾಳಾಗಿಸಿದ ಉಗ್ರರು