ಬಡ ಕುಟುಂಬದ ಪುಟಾಣಿ ರಿಷಿಕಾಳ ಚಿಕಿತ್ಸೆಗೆ ನೀವು ನೆರವಾಗುವಿರಾ? - Mahanayaka
1:21 AM Wednesday 11 - December 2024

ಬಡ ಕುಟುಂಬದ ಪುಟಾಣಿ ರಿಷಿಕಾಳ ಚಿಕಿತ್ಸೆಗೆ ನೀವು ನೆರವಾಗುವಿರಾ?

help rishikas treatment
07/10/2021

ಮೈಸೂರು: ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಒಂದು ವರ್ಷದ ಹೆಣ್ಣು ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಮಗುವಿನ ತಂದೆ ಮನವಿ ಮಾಡಿಕೊಂಡಿದ್ದಾರೆ. ಪಾತ್ರೆ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿರುವ ಮಗುವಿನ ತಂದೆ ಮಗುವಿನ ಚಿಕಿತ್ಸೆಗೆ ಬೇಕಾಗಿರುವ ದೊಡ್ಡ ಮೊತ್ತವನ್ನು ಭರಿಸಲು ಅಶಕ್ತರಾಗಿದ್ದಾರೆ. ಹಾಗಾಗಿ ಸಹೃದಯಿ ದಾನಿಗಳ ನೆರವು ಕೇಳಿದ್ದಾರೆ.

ಒಂದು ವರ್ಷ ವಯಸ್ಸಿನ ರಿಷಿಕಾಗೆ ಹುಟ್ಟಿ ಮೂರು ತಿಂಗಳಿದ್ದಾಗ ಕರುಳು ಸುತ್ತಿಕೊಂಡಿದೆ, ಮೋಶನ್ ಪ್ರಾಬ್ಲಂ ಇದೆ ಎಂದು ಆಪರೇಷನ್ ಮಾಡಿಸಲಾಗಿತ್ತು. ಈ ಆಪರೇಷನ್ ಬಳಿಕ ಮಗುವಿಗೆ ಒಂದು, ಒಂದೂವರೆ ತಿಂಗಳಿಗೊಮ್ಮೆ ಹಾರ್ಟ್ ಬೀಟ್ ಬಹಳ ವೇಗವಾಗಿ ಹೊಡೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಉಸಿರಾಟಕ್ಕೂ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಮುಂದಿನ ಚಿಕಿತ್ಸೆಗೆ ಸುಮಾರು 100000 ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಮಗುವಿನ ತಂದೆ ರಾಜಶೇಖರ್ ಮಹಾನಾಯಕ ಡಾಟ್ ಇನ್ ಗೆ ತಿಳಿಸಿದ್ದಾರೆ.

ಮೈಸೂರು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ಮಗುವನ್ನು ದಾಖಲಿಸಲಾಗಿದೆ. ಮಗುವಿನ ಚಿಕಿತ್ಸೆಗಾಗಿ ತಂದೆ ರಾಜಶೇಖರ್ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇವರಿಗೆ ಪಾತ್ರೆ ಮಾರಾಟ ಮಾಡಿ ದಿನಕ್ಕೆ 300 ರೂಪಾಯಿ 400 ರೂಪಾಯಿಗಳಷ್ಟೇ ಆದಾಯ ಬರುತ್ತದೆ. 1 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಏಕಾಏಕಿ ಹೊಂದಿಸಲು ಇವರಿಂದ ಸಾಧ್ಯವಿಲ್ಲ. ಹಾಗಾಗಿ ಮಗುವಿನ ಚಿಕಿತ್ಸೆಗೆ ನೆರವು ನೀಡುವಂತೆ ಸಹೃದಯಿಗಳ ಬಳಿಯಲ್ಲಿ ಮನವಿ ಮಾಡಿದ್ದಾರೆ.

ಮಗುವಿನ ಚಿಕಿತ್ಸೆಗೆ ನೆರವು ನೀಡುವವರು ಮಗುವಿನ ತಂದೆ ರಾಜಶೇಖರ್ ಅವರ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸಂಖ್ಯೆ 6360841414ಗೆ ನಿಮ್ಮ ಕೈಲಾದ ಸಹಾಯ ನೀಡಬಹುದು. ಅವರ ಬ್ಯಾಂಕ್ ಖಾತೆಗೂ  ನೆರವು ನೀಡಬಹುದು. ನಿಮ್ಮ ಸಣ್ಣ ನೆರವು ಕೂಡ ಮಗುವಿನ ಚಿಕಿತ್ಸೆಗೆ ಉಪಯುಕ್ತವಾಗಲಿದೆ.

ಬ್ಯಾಂಕ್ ವಿವರ:

Bank Name:  State Bank of India

Name: Rajashekhar

Account Number: 38027162438

IFSC: SBIN0007968

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

 

ಇತ್ತೀಚಿನ ಸುದ್ದಿ