ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದ ವಿಂಬಲ್ಡನ್: ರೋಹನ್ ಬೋಪಣ್ಣ ‘ಭಾರತದ ಸೂಪರ್ ಸ್ಟಾರ್’ ಎಂದ ವಿಂಬಲ್ಡನ್
‘ಭಾರತದ ಸೂಪರ್ ಸ್ಟಾರ್’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದ ವಿಂಬಲ್ಡನ್ ಟ್ವೀಟ್ಗೆ ಭಾರತದ ವೃತ್ತಿಪರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಕನ್ನಡದಲ್ಲೇ ಪ್ರತಿಕ್ರಿಯಿಸಿ ಗಮನ ಸೆಳೆದಿದ್ದಾರೆ.
ಭಾರತದ ಹಿರಿಯ ಆಟಗಾರ ರೋಹನ್ ಬೋಪಣ್ಣ ಅವರು ವಿಂಬಲ್ಡನ್ ಪುರುಷರ ಡಬಲ್ಸ್ ವಿಭಾಗದ 16ನೇ ಸುತ್ತಿನಲ್ಲೂ ಗೆದ್ದು ಕ್ವಾರ್ಟರ್ ಫೈನಲ್ಗೆ ಕಾಲಿಟ್ಟಿದ್ದಾರೆ. ಆದರೆ, 2ನೇ ಸುತ್ತಿನಲ್ಲಿ ಜಯಿಸಿದ ಬಳಿಕ ಈ ಬೆನ್ನಲ್ಲೇ ವಿಂಬಲ್ಡನ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರೋಹನ್ ಬೋಪಣ್ಣರನ್ನು ಭಾರತದ ಸೂಪರ್ ಸ್ಟಾರ್ ಎಂದು ಟ್ವೀಟ್ ಮಾಡುವ ಮೂಲಕ ವಿಶೇಷ ಗೌರವ ಸೂಚಿಸಿತ್ತು. ಇದು ಮೆಚ್ಚುಗೆಗೆ ಪಾತ್ರವಾಗಿದೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಮ್ಯಥ್ಯೂ ಎಬ್ಡೆನ್ ಮತ್ತು ಕನ್ನಡಿಗ ರೋಹನ್ ಬೋಪಣ್ಣ ಜೋಡಿ 3ನೇ ಸುತ್ತಿಗೆ ಪ್ರವೇಶಿಸಿ 2ನೇ ಸುತ್ತಿನ ಹಣಾಹಣಿಯಲ್ಲಿ ಯುನೈಟೆಡ್ ಕಿಂಗ್ ಡಮ್ ಜೋಡಿಯನ್ನು 7-5, 6-3ರ ನೇರ ಸೆಟ್‌ಗಳ ಅಂತರದಲ್ಲಿ ಮಣಿಸಿತ್ತು. ಈ ಸಂದರ್ಭದಲ್ಲಿ ವಿಂಬಲ್ಡನ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬೋಪಣ್ಣರನ್ನು ಕನ್ನಡದಲ್ಲೇ ಹಾಡಿಹೊಗಳಿದ್ದು, ಈಗಲೂ ಸಹ ಆ ಪೋಸ್ಟ್ಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ವಿಂಬಲ್ಡನ್ ಟ್ವೀಟ್ಗೆ ರೋಹನ್ ಬೋಪಣ್ಣ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿದ್ದು, ಕನ್ನಡಗಿರ ಮನ ಗೆದ್ದಿರುವ ಭಾರತದ ಸೂಪರ್ ಸ್ಟಾರ್ ಎಂಬ ಟ್ವೀಟ್ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೋಹನ್ ಬೋಪಣ್ಣ ಧನ್ಯವಾದ ಎಂದು ಕನ್ನಡದಲ್ಲೇ ಉತ್ತರಿಸಿದ್ದಾರೆ. ಇದು ಕೂಡ ಕನ್ನಡಿಗರ ಗಮನ ಸೆಳೆದಿದ್ದು, ಜಾಗತಿಕ ಟೂರ್ನಿಯಲ್ಲಿ ಕನ್ನಡ ಬಳಸಿದ್ದಕ್ಕೆ ಕನ್ನಡಿಗರು ಅತೀವ ಸಂತೋಷಕ್ಕೆ ಒಳಗಾಗಿದ್ದಾರೆ.
ಮೂಲತ: ಕರ್ನಾಟಕದ ರಾಜಧಾನಿ ಬೆಂಗಳೂರಿನವರಾಗಿರುವ ರೋಹನ್ ಬೋಪಣ್ಣ ಒಬ್ಬ ಭಾರತೀಯ ವೃತ್ತಿಪರ ಟೆನಿಸ್ ಆಟಗಾರನಾಗಿದ್ದು, 1980ರ ಮಾರ್ಚ್ 4ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಂಜಿ ಬೋಪಣ್ಣ, ತಾಯಿ ಮಲ್ಲಿಕಾ ಬೋಪಣ್ಣ, ಪತ್ನಿ ಸುಪ್ರೀಯಾ ಅಣ್ಣಯ್ಯ. ಅವರ ಶಿಕ್ಷಣ ವಿವಿ ಪುರಂನ ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) , ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಪದವಿ ಮುಗಿಸಿದರು. 1995ರ ಜೂನಿಯರ್ ಕಪ್ನಿಂದಲೇ ಅವರ ವೃತ್ತಿಜೀವನ ಆರಂಭವಾಗಿದೆ. ಈವರೆಗೂ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw