ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಗೆಲ್ಲಿಸಿ: ದೀಪಕ್ ದೊಡ್ಡಯ್ಯ
ಮೂಡಿಗೆರೆ: ರಾಜ್ಯದ ಅಭಿವೃದ್ಧಿ ಕೇವಲ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. ಮತದಾರರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ತಿಳಿಸಿದರು.
ಅವರು ಕಸಬಾ ಹೋಬಳಿ ಕಮಾಕೋನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿ. ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಮಹಿಳೆಯರು. ದೀನ ದಲಿತರು. ಮತ್ತು ಮಧ್ಯಮ ವರ್ಗದ. ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು. ಅದನ್ನು ಯಶಸ್ವಿಯಾಗಿ ಜನಸಾಮಾನ್ಯರ ಮನೆ ಮನೆಗೆ ತಲುಪಿಸಲಾಗಿದೆ ಎಂದರು.
ಮುಖ್ಯವಾಗಿ ಇಡೀ ವಿಶ್ವವೇ ಕೋವಿಡ್ ನಿಂದ ತತ್ತರಿಸಿದಾಗ ಭಾರತದಲ್ಲಿ ಉಚಿತ ವ್ಯಾಕ್ಸಿನ್ ಮತ್ತು ಆರೋಗ್ಯ ಸೇವೆಯನ್ನು ನೀಡಿ ಜನರ ಜೀವ ಉಳಿಸಿ ಇಡೀ ವಿಶ್ವಕ್ಕೆ ಮಾದರಿ ದೇಶ ಎನಿಸಿಕೊಂಡಿತು. ಅಲ್ಲದೆ ಹಸಿದವರಿಗೆ ಉಚಿತ ಅಕ್ಕಿ ಕೂಡ ನೀಡಲಾಯಿತು. ರಾಜ್ಯ ಸರ್ಕಾರವು ರಸ್ತೆ. ವಸತಿ. ವಿದ್ಯುತ್. ಶಿಕ್ಷಣ. ಮಹಿಳಾ ಸಬಲಿಕರಣ.ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆ ಮೂಲಕ ಜನರಿಗೆ ಮಾದರಿ ಆಡಳಿತ ನೀಡಿದ್ದು, ಕಾಂಗ್ರೆಸ್ ಸರ್ಕಾರ ಈ ಹಿಂದೆ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು. ಸಾಮೂಹಿಕ ಹತ್ಯೆಗೆ ಕುಮ್ಮಕ್ಕು ನೀಡಿದ್ದು. ಮತ್ತೊಮ್ಮೆ ರಾಜ್ಯವನ್ನು ದಿವಾಳಿಗೆ ನೂಕಲು ತಯಾರಾಗಿದ್ದು. ಇದನ್ನು ತಡೆಯಲು ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ವೇಳೆ ಅಭ್ಯರ್ಥಿ ಪ್ರಮುಕ್ ಕೆಸಿ ರತನ್ . ಕಲ್ಲೆಶ್. ಕೃಷ್ಣೆಗೌಡ. ಸುರೇಂದ್ರ ಡಿಎಸ್ ವಿಜಯ್ ಕುಮಾರ್. ಮನೋಜ್ ಹಳೆಕೋಟೆ. ಸುನೀಲ್ ಪುರ ಜ್ಯೆರಾಮ್ ಸಂದೀಪ್. ಮಂಜು. ಮತ್ತಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw