ತಾನೇ ಹಲ್ಲೆ ಮಾಡಿ, ತನ್ನ ಮೇಲೆ ಹಲ್ಲೆಯಾಯ್ತು ಎಂದು ವಿಂಗ್ ಕಮಾಂಡರ್ ಹೈಡ್ರಾಮ!

ಬೆಂಗಳೂರು: ವಿಂಗ್ ಕಮಾಂಡರ್ ಬೋಸ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಬೆಂಗಳೂರಿನಲ್ಲಿ ಉತ್ತರ ಭಾರತೀಯರಿಗೆ ರಕ್ಷಣೆ ಇಲ್ಲಅಂತ ಸ್ವತಃ ವಿಂಗ್ ಕಮಾಂಡರ್ ವಿಡಿಯೋ ಮಾಡಿ ಕನ್ನಡಿಗರನ್ನು ದೂಷಿಸಿದ್ದರು. ಆದ್ರೆ ಇದೀಗ ಘಟನೆಯ ಸತ್ಯಾಂಶ ಬಯಲಾಗಿದೆ.
ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ವಿಂಗ್ ಕಮಾಂಡರ್ ಬೋಸ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದರು. ಕಾರು, ಬೈಕಿನ ನಡುವೆ ಡಿಕ್ಕಿಯಾಗಿದ್ದರಿಂದ ಈ ಘಟನೆ ನಡೆದಿದ್ದು, ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮುಖಕ್ಕೆ ರಕ್ತ ಬರಿಸಿಕೊಂಡು ಅವರು ವಿಡಿಯೋ ಪೋಸ್ಟ್ ಮಾಡಿದ್ದರು.
ಈ ವಿಡಿಯೋದ ಆಧಾರದಲ್ಲಿ ಪೊಲೀಸರು ಯುವಕನ ವಿರುದ್ಧ ಎಫ್ ಐಆರ್ ದಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಇದೀಗ ಸಿಸಿ ಕ್ಯಾಮರಾ ದೃಶ್ಯಾವಳಿಗಳಿಂದ ಸತ್ಯಾಂಶ ಬಯಲಾಗಿದೆ.
ಸಿಸಿ ಟಿವಿ ದೃಶ್ಯದಲ್ಲಿ ಯುವಕ ಹಲ್ಲೆ ಮಾಡಿಲ್ಲ, ಬದಲಾಗಿ ವಿಂಗ್ ಕಮಾಂಡರ್ ಬೋಸ್ ಯುವಕನ ಮೇಲೆ ರೌದ್ರಾವತಾರ ತಾಳಿ ಭೀಕರವಾಗಿ ದಾಳಿ ನಡೆಸುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಎಷ್ಟೇ ಬಿಡಿಸಲು ಮುಂದಾದರೂ ಯುವಕನ ಮೇಲೆ ಮಾರಕ ದಾಳಿ ನಡೆಸಿದ್ದ ವಿಂಗ್ ಕಮಾಂಡರ್ ಬೋಸ್, ಯುವಕ ನೆಲಕ್ಕೆ ಬಿದ್ದರೂ ಆತನನ್ನು ಬಿಡದೇ ಕ್ರೂರವಾಗಿ ಆತನ ಮೇಲೆ ಎರಗಿರುವುದು ಕಂಡು ಬಂದಿದೆ.
ಯುವಕನ ಮೇಲೆ ಮಾರಕ ದಾಳಿ ನಡೆಸಿದ್ದಲ್ಲದೇ, ಬೆಂಗಳೂರು ಸೇಫ್ ಅಲ್ಲ ಎಂದು ಬಿಂಬಿಸಲು ವಿಂಗ್ ಕಮಾಂಡ್ ಬೋಸ್ ಮುಂದಾಗಿರುವುದು ಇದೀಗ ಬೆಂಗಳೂರಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: