ವಿಶ್ವಕಪ್ ಸೆಮಿಫೈನಲ್ ನಲ್ಲಿ ಶಮಿ ಕಮಾಲ್: ಮಾಧ್ಯಮದ ಪ್ರಶ್ನೆಗೆ ವಿಚ್ಛೇದಿತ ಪತ್ನಿ ಶಮಿ ಬಗ್ಗೆ ಹೇಳಿದ್ದೇನು ಗೊತ್ತಾ..?

ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವೇಗಿ ಮುಹಮ್ಮದ್ ಶಮಿ 23 ವಿಕೆಟ್ ಕಬಳಿಸಿದ್ದಾರೆ. ಶಮಿ ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಮೌಲ್ಯವನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಇದೇ ವೇಳೆ ಅವರ ವಿಚ್ಛೇದಿತ ಪತ್ನಿ ಹಸೀನಾ ಜಹಾನ್ ಅವರು “ಅವರು ಆಟಗಾರನಷ್ಟೇ ಉತ್ತಮ ವ್ಯಕ್ತಿ” ಎಂದು ಹೇಳಿಕೆ ನೀಡಿದ್ದಾರೆ.
ಕೌಟುಂಬಿಕ ದೌರ್ಜನ್ಯ ಮತ್ತು ವ್ಯಭಿಚಾರದ ಆರೋಪ ಮಾಡಿದ ನಂತರ ಶಮಿ 2018 ರಲ್ಲಿ ಪತ್ನಿಯಿಂದ ಬೇರ್ಪಟ್ಟಿದ್ದರು. ಅವರು ಉತ್ತಮ ಆಟಗಾರ ಮಾತ್ರವಲ್ಲ, ಉತ್ತಮ ಪತಿ ಮತ್ತು ಉತ್ತಮ ತಂದೆಯಾಗಿದ್ದರೆ ಅದು ಇನ್ನೂ ಗೌರವದ ವಿಷಯವಾಗಿರುತ್ತದೆ”ಎಂದು ಕ್ರಿಕೆಟಿಗನ ವಿಚ್ಛೇದಿತ ಪತ್ನಿ ಹೇಳಿದ್ದಾರೆ.
ನ್ಯೂಝಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ ಏಳು ವಿಕೆಟ್ ಪಡೆಯುವ ಮೂಲಕ ದಾಖಲೆಗಳನ್ನು ಮುರಿದಾಗ ನಿಮಗೆ ವಿಶೇಷ ಅನಿಸುತ್ತದೆಯೇ ಎಂದು ಕೇಳಿದಾಗ, ಹಸೀನಾ ಜಹಾನ್, “ನನಗೆ ವಿಶೇಷವಾದದ್ದೇನೂ ಅನಿಸುವುದಿಲ್ಲ. ಆದರೆ ಭಾರತ ಸೆಮಿಫೈನಲ್ ಪಂದ್ಯವನ್ನು ಗೆದ್ದಿರುವುದು ಒಳ್ಳೆಯದು. ಭಾರತ ಫೈನಲ್ ಪಂದ್ಯವನ್ನೂ ಗೆಲ್ಲಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.