ಇದ್ದಕ್ಕಿದ್ದಂತೆ ಕೀ ನಾಪತ್ತೆ: ಹೊಸ ಕಚೇರಿ ಉದ್ಘಾಟನೆ ವೇಳೆ ‘ಮಹಾ’ ಡಿಸಿಎಂಗೆ ಆಯ್ತು ತಲೆಬಿಸಿ..!
ಎನ್ ಸಿಪಿ ಪಕ್ಷದೊಳಗಿನ ರಾಜಕೀಯ ಬಿಕ್ಕಟ್ಟಿನ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಅಜಿತ್ ಪವಾರ್ ನೇತೃತ್ವದ ಬಣ ಇಂದು ಕಚೇರಿ ಕೀ ಕಳೆದುಕೊಂಡು ಮುಜುಗರಕ್ಕೊಳಗಾಗಿದೆ. ಈಗ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆಗಿರುವ ಅಜಿತ್ ಪವಾರ್ ಅವರು ರಾಜ್ಯ ಸಚಿವಾಲಯದ ಬಳಿ ಪಕ್ಷದ ಹೊಸ ಕಚೇರಿಯನ್ನು ಇಂದು ಉದ್ಘಾಟಿಸಬೇಕಾಗಿತ್ತು. ಆದರೆ ಇಂದು ಅಜಿತ್ ಪವಾರ್ ಅವರ ನಿಷ್ಠಾವಂತ ನಾಯಕರು ಹೊಸ ರಾಷ್ಟ್ರವಾದಿ ಭವನವನ್ನು ತಲುಪಿದಾಗ ಅದಕ್ಕೆ ಬೀಗ ಹಾಕಿತ್ತು. ಜೊತೆಗೆ ಕೀಗಳು ನಾಪತ್ತೆಯಾಗಿರೋದು ಕಂಡುಬಂತು.
ಬೀಗ ಹಾಕಿದ ಕಚೇರಿ ಹೊರಗೆ ಪಕ್ಷದ ನಾಯಕರು ಕೂತಿದ್ದರು. ಬಾಗಿಲ ತೆರೆಯಲಾಗದೆ ಒದ್ದಾಡುತ್ತಿದ್ದ ಕಾರ್ಯಕರ್ತರು ಒಂದೆಡೆಯಾದರೆ, ಕೀಗಳನ್ನು ಹುಡುಕುವವರು ಮತ್ತೊಂದೆಡೆ. ಅಜಿತ್ ಪವಾರ್ ಉದ್ಘಾಟನೆ ಮಾಡಲಿರುವ ಕಚೇರಿಯಲ್ಲಿ ಸಿದ್ಧತೆ ನಡೆಸಲು ಪಕ್ಷದ ಸದಸ್ಯರು ಬೀಗ ಒಡೆಯಲು ಪ್ರಯತ್ನಿಸುತ್ತಿದ್ದರು. ಹೇಗೋ ಬೀಗ ಒಡೆದು ಒಳಗೆ ಹೋದರೆ ಒಳಗಿನ ಕೋಣೆಗಳ ಬಾಗಿಲುಗಳು ಸಹ ಲಾಕ್ ಆಗಿದ್ದವು.
ಅಜಿತ್ ಪವಾರ್ ಅವರು ಪಕ್ಷದ ಕಚೇರಿಗೆ ಆಯ್ಕೆ ಮಾಡಿದ್ದ ಬಂಗಲೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಮತ್ತು ಉದ್ಧವ್ ಠಾಕ್ರೆ ಅವರ ನಿಷ್ಠಾವಂತ ಅಂಬಾದಾಸ್ ದಾನ್ವೆ ಅವರಿಗೆ ಸೇರಿತ್ತು. ದಾನ್ವೆ ಅವರಿಗೆ ಈಗ ಮತ್ತೊಂದು ಬಂಗಲೆ ಮಂಜೂರು ಮಾಡಲಾಗಿದೆ.
ದಾನ್ವೆ ಅವರ ಆಪ್ತ ಸಹಾಯಕರು ಬಂಗಲೆಯಲ್ಲಿ ಮಲಗಿದ್ದರು ಎಂದು ಎನ್ ಸಿಪಿ ನಾಯಕ ಅಪ್ಪಾ ಸಾವಂತ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ನಾವು ಒಳಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೆ ಪಿಎ ಬೀಗ ಹಾಕಿಕೊಂಡು ಹೋದರು. ನಾವು ಅವರನ್ನು ಕರೆದಿದ್ದೇವೆ. ಅವರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ. ಕೀಗಳನ್ನು ನಮಗೆ ಹಸ್ತಾಂತರಿಸುವುದಾಗಿ ಹೇಳಿದರ ಎಂದು ಎನ್‌ಸಿಪಿಯ ಮುಂಬೈ ವಿಭಾಗ ಉಪಾಧ್ಯಕ್ಷ ಸಾವಂತ್ ಹೇಳಿದರು. ಅದೇ ವೇಳೆ ಇದರ ಹಿಂದೆ ಷಡ್ಯಂತ್ರವಿದೆ ಎಂದು ಎನ್‌ಸಿಪಿ ನಾಯಕ ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw