ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ 14.600 ಕೆ.ಜಿ. ಚಿನ್ನ ಖರೀದಿಸಿ ವಂಚಿಸಿದ ಮಹಿಳೆ! - Mahanayaka
10:24 PM Tuesday 24 - December 2024

ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ 14.600 ಕೆ.ಜಿ. ಚಿನ್ನ ಖರೀದಿಸಿ ವಂಚಿಸಿದ ಮಹಿಳೆ!

aishwarya gowda
24/12/2024

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಮಹಿಳೆಯೊಬ್ಬರು 14.600 ಕೆ.ಜಿ.ಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಘಟನೆ ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ, ನಟ ಧರ್ಮೇಂದ್ರ ಹಾಗೂ ಹರೀಶ್ ಎಂಬವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ನಿಂದ ಆರೋಪಿತ ಮಹಿಳೆ ಐಶ್ವರ್ಯ ಗೌಡ 11 ಬಾರಿ ಚಿನ್ನ ಖರೀದಿಸಿ ವಂಚಿಸಿರುವ ಬಗ್ಗೆ ಅಂಗಡಿ ಮಾಲಿಕರಾದ ವನಿತಾ ಐತಾಳ್ ದೂರು ನೀಡಿದ್ದಾರೆ.

ಜನವರಿಯಿಂದ ಈವರೆಗೆ ಐಶ್ವರ್ಯ ಗೌಡ 14 ಕೆ.ಜಿ. 600 ಗ್ರಾಂ ನಷ್ಟು ಚಿನ್ನಾಭರಣ ಖರೀದಿಸಿದ್ದಳು. ಹಣ ಕೊಡದೇ ಇದ್ದಾಗ ಡಿ.ಕೆ.ಸುರೇಶ್ ಅವರ ಕಡೆಯಿಂದ ಮಾಲಿಕರಿಗೆ ಕರೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಳಂತೆ.ಸಿನಿಮಾ ನಟ ಧರ್ಮೇಂದ್ರ ಎಂಬವರಿಂದ ಮಾಲಿಕರಿಗೆ ಕರೆ ಮಾಡಿಸಿ, ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿಸಿ ಮಾಲಿಕರನ್ನ ನಂಬಿಸಿದ್ದ ಐಶ್ವರ್ಯ, ಕೊನೆಗೆ ಧರ್ಮೇಂದ್ರನನ್ನ ಕಳುಹಿಸಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದು, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸದ್ಯ ಮೂವರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ