ಬಾವಿಗೆ ಬಿದ್ದ ಪತಿಯನ್ನು ರಕ್ಷಿಸಲು 40 ಅಡಿ ಆಳಕ್ಕೆ ಇಳಿದ ಮಹಿಳೆ! - Mahanayaka
4:35 PM Thursday 6 - February 2025

ಬಾವಿಗೆ ಬಿದ್ದ ಪತಿಯನ್ನು ರಕ್ಷಿಸಲು 40 ಅಡಿ ಆಳಕ್ಕೆ ಇಳಿದ ಮಹಿಳೆ!

06/02/2025

ಕೇರಳದಲ್ಲಿ ಮಹಿಳೆಯೊಬ್ಬರು ಬಾವಿಗೆ ಆಕಸ್ಮಿಕವಾಗಿ ಬಿದ್ದ ಪತಿಯನ್ನು ರಕ್ಷಿಸಲು 40 ಅಡಿ ಆಳಕ್ಕೆ ಇಳಿದ ಘಟನೆ ನಡೆದಿದೆ. ಪಿರಾವಂ ಪುರಸಭೆಯ ಇಳಂಜಿಕಾವಿಲ್ ನಲ್ಲಿ ವಾಸಿಸುವ 64 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ರಮೇಸನ್ ಬುಧವಾರ ಮಧ್ಯಾಹ್ನ ಬಾವಿಗೆ ಬಿದ್ದಾಗ ಈ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ರಾಮೇಶನ್ ಎಂಬುವವರು ತನ್ನ ಅಂಗಳದಲ್ಲಿರುವ ಬಾವಿಯ ಬಳಿ ಮೆಣಸು ಕೀಳುವಾಗ ಬಿದ್ದಿದ್ದಾರೆ. ಮರದ ಕೊಂಬೆ ಮುರಿದು ಅವರು ಕೆಳಗೆ ಬಿದ್ದಿದ್ದಾರೆ. ಬಾವಿಯು ಸುಮಾರು 40 ಅಡಿ ಆಳವಿತ್ತು. ತಳದಲ್ಲಿ ಸುಮಾರು ಐದು ಅಡಿ ನೀರು ಇತ್ತು.

ಕೂಡಲೇ ಇವರ ಪತ್ನಿ ಪದ್ಮಮ್ ಎಂಬುವವರು ಮೊದಲು ಪತಿಯು ಬಾವಿಯಿಂದ ಹೊರಬರಲು ಸಹಾಯ ಮಾಡಲು ಪ್ಲಾಸ್ಟಿಕ್ ಹಗ್ಗವನ್ನು ಎಸೆದಿದ್ದಾರೆ. ಆದರೆ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳಕ್ಕೆ ಕರೆ ಮಾಡುವಂತೆ ಮಹಿಳೆಯು ತನ್ನ ಸಂಬಂಧಿಕರಲ್ಲಿ ಹೇಳಿದ್ದಾರೆ.ಯಾವುದೇ ಹಿಂಜರಿಕೆಯಿಲ್ಲದೆ ಪತಿ ನೀರಲ್ಲಿ ಮುಳುಗದಂತೆ ತಡೆಯಲು ಸ್ವತಃ ಕೆಳಗೆ ಇಳಿದಿದ್ದಾರೆ.

ಮೊದಲಿಗೆ ಮಹಿಳೆ ಪದ್ಮಮ್ ಹಗ್ಗವನ್ನು ಬಳಸಿ ಬಾವಿಗೆ ಇಳಿಯಲು ಪ್ರಯತ್ನಿಸಿದ್ದಾಳೆ. ಆದರೆ ತನ್ನ ಹಿಡಿತವನ್ನು ಕಳೆದುಕೊಂಡರು. ಬಾವಿಯೊಳಗೆ ಇಳಿಯುವವರೆಗೂ ಬಿದ್ದಿದ್ದಾರೆ. ಮಂದ ಬೆಳಕಿನಲ್ಲಿ ತನ್ನ ಗಂಡನನ್ನು ನೋಡಲು ಸಾಧ್ಯವಾಗದೆ ನೀರಿಗೆ ಹಾರುವ ಧೈರ್ಯಶಾಲಿ ನಿರ್ಧಾರವನ್ನು ತೆಗೆದುಕೊಂಡರು. ಆವಾಗ ಸ್ಥಳಕ್ಕೆ ಬಂದ ಪಿರಾವಂ ನಿಲಯಂನ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗಗಳು ಮತ್ತು ಬಲೆಗಳನ್ನು ಬಳಸಿ ಇಬ್ಬರನ್ನೂ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸಣ್ಣಪುಟ್ಟ ಗಾಯ ಆದ ಕಾರಣ ಇವರಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ