ಮದುವೆ ಆದ ಕೆಲವೇ ದಿನಗಳಲ್ಲಿ ಇಂಗ್ಲೀಷ್ ಬರಲ್ಲವೆಂದು ಟಾರ್ಚರ್: 19 ವರ್ಷದ ಮಧುಮಗಳು ಆತ್ಮಹತ್ಯೆ
ಕೇರಳದ ಮಲಪ್ಪುರಂ ಜಿಲ್ಲೆಯ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಶಹಾನಾ ಮುಮ್ತಾಜ್, ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಮೈಬಣ್ಣದ ಬಗ್ಗೆ ಮತ್ತು ಇಂಗ್ಲಿಷ್ ಮಾತನಾಡಲು ಬರಲ್ಲ ಎಂದು ಪತಿ ಮತ್ತು ಅತ್ತೆ ಮಾವಂದಿರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಮೊದಲ ವರ್ಷದ ಬಿಎಸ್ಸಿ ಮ್ಯಾಥ್ಸ್ ವಿದ್ಯಾರ್ಥಿನಿಯಾಗಿದ್ದ ಶಹಾನಾ ಕಳೆದ ವರ್ಷ ಮೇ ತಿಂಗಳಲ್ಲಿ ಅಬುಧಾಬಿ ಮೂಲದ ಉದ್ಯೋಗಿ ಅಬ್ದುಲ್ ವಹಾಬ್ ಅವರನ್ನು ವಿವಾಹವಾಗಿದ್ದರು. ವಹಾಬ್, ಯುಎಇಗೆ ಮರಳುವ ಮೊದಲು ದಂಪತಿ ತಮ್ಮ ಮದುವೆಯ ನಂತರ 22 ದಿನಗಳನ್ನು ಒಟ್ಟಿಗೆ ಕಳೆದಿದ್ದರು ಎಂದು ಅವರ ಕುಟುಂಬ ತಿಳಿಸಿದೆ.
ಶಹಾನಾ ಅವರ ಚಿಕ್ಕಪ್ಪ ಅಬ್ದುಲ್ ಸಲಾಮ್, ವಹಾಬ್ ಅಬುಧಾಬಿಗೆ ಹೋದ ನಂತರ ಕರೆಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡಿದ್ದ ಎಂದು ಹೇಳಿದ್ದಾರೆ.
ಶಹಾನಾ ಈ ಕುರಿತು ತನ್ನ ಅತ್ತೆಗೂ ಹೇಳಿದ್ದಳು. ಆದರೆ ಅವರು ಈಕೆಯ ಆರೋಪವನ್ನು ತಳ್ಳಿಹಾಕಿದ್ದರು.
ಜನವರಿ 14 ರಂದು ಶಹಾನಾ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೊಂಡೊಟ್ಟಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆಯ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj