ತೆಂಗಿನಕಾಯಿಯನ್ನು ಬಾಂಬ್ ಎಂದ ಆತ: ಬೆಚ್ಚಿಬಿದ್ದ ಮಹಿಳೆ; ಕೊನೆಗೆ ಸುಸ್ತೋ ಸುಸ್ತು..! - Mahanayaka
10:12 AM Thursday 12 - December 2024

ತೆಂಗಿನಕಾಯಿಯನ್ನು ಬಾಂಬ್ ಎಂದ ಆತ: ಬೆಚ್ಚಿಬಿದ್ದ ಮಹಿಳೆ; ಕೊನೆಗೆ ಸುಸ್ತೋ ಸುಸ್ತು..!

09/06/2023

ಬಾಂಬ್ ಬೆದರಿಕೆಯಿಂದ ದಿಲ್ಲಿ–ಮುಂಬೈ ವಿಸ್ತಾರ ವಿಮಾನ ಎರಡು ಗಂಟೆ ವಿಳಂಬ ಆದ ಘಟನೆ ಬೆಳಕಿಗೆ ಬಂದಿದೆ. ದುಬೈಗಾಗಿ ವಿಸ್ತಾರ ಏರ್‌ಲೈನ್ಸ್‌ನ ದಿಲ್ಲಿ-ಮುಂಬೈ ಸಂಪರ್ಕ ವಿಮಾನವನ್ನು ಹತ್ತಿದ್ದ ವ್ಯಕ್ತಿ ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದಾಗ ‘ಬಾಂಬ್’ ಎಂಬ ಪದವನ್ನು ಮಹಿಳಾ ಸಹಪ್ರಯಾಣಿಕರೋರ್ವರು ಕೇಳಿಸಿಕೊಂಡಿದ್ದಾರೆ.

ಆತಂಕಗೊಂಡಿದ್ದ ಆಕೆ ತಕ್ಷಣ ವಿಮಾನದ ಸಿಬ್ಬಂದಿಗೆ ತಿಳಿಸಿದ್ದರು. ಈ ಘಟನೆಯು ಸಂಜೆ 4:55ಕ್ಕೆ ಸಂಭವಿಸಿದ್ದು, ಇದರಿಂದಾಗಿ ಯಾನವು ಎರಡು ಗಂಟೆ ವಿಳಂಬಗೊಂಡಿತ್ತು.

ವ್ಯಕ್ತಿಯು ದುಬೈಗೆ ಪ್ರಯಾಣಿಸುತ್ತಿದ್ದ ವೇಳೆ ತನ್ನ ತಾಯಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಆತ ತಾನು ತನ್ನ ಬ್ಯಾಗಿನಲ್ಲಿ ತೆಂಗಿನಕಾಯಿ ಸಾಗಿಸುವುದನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಡೆದಿದ್ದರು. ಅದರಲ್ಲಿ ಬಾಂಬ್ ಇರಬಹುದೆಂದು ಅವರು ಆತಂಕಗೊಂಡಿದ್ದರು ಎಂದು ತಾಯಿಗೆ ತಿಳಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಪ್ರಯಾಣಿಕರನ್ನು ಕೆಳಗಿಳಿಸಿ ವಿಮಾನವನ್ನು ಸಮಗ್ರವಾಗಿ ತಪಾಸಣೆ ನಡೆಸಲಾಯಿತು. ಆದರೆ ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಲಿಲ್ಲ. ಬಳಿಕ ವ್ಯಕ್ತಿಯನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು. ತದನಂತರ ವಿಮಾನ ಪ್ರಯಾಣ ಆರಂಭವಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ